ಮೈಸೂರುಸುದ್ದಿ ಸಂಕ್ಷಿಪ್ತ

“ಸಂಭ್ರಮ” ಕಥಕ್ ನೃತ್ಯ ಕಾರ್ಯಕ್ರಮ ಡಿ.31ಕ್ಕೆ

ಬೆಂಗಳೂರಿನ ನೂಪುರ್ ಪಫಾರ್ಮಿಂಗ್ ಆರ್ಟ್‍ ಸೆಂಟರ್`ನ ನಿರ್ದೇಶಕರೂ ಆಗಿರುವ ಖ್ಯಾತ ನೃತ್ಯ ಕಲಾವಿದ ದಂಪತಿಯಾದ ಹರಿ ಮತ್ತು ಚೇತನಾ ಅವರು ಕಥಕ್ ಗ್ರಾಮ ಸ್ಥಾಪನೆಗಾಗಿ ದೇಣಿಗೆ ಸಂಗ್ರಹಿಸಲೆಂದು ಕಥಕ್ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

“ಸಂಭ್ರಮ” ಶೀರ್ಷಿಕೆಯಲ್ಲಿ ಈ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಹೊರವಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಥಕ್ ಗ್ರಾಮದ ಬಗ್ಗೆ ಅರಿವು ಮೂಡಿಸುವುದೂ ಸಹ ಈ ನೃತ್ಯ ಪ್ರದರ್ಶನದ ಗುರಿಯಾಗಿದೆ. ಕಥಕ್ ಗ್ರಾಮ ಎಂಬುದು ಅನನ್ಯವಾದ ನೃತ್ಯ ಕೇಂದ್ರವಾಗಲಿದ್ದು, ಸಮಾಜದ ಮುಂದಿನ ಪೀಳಿಗೆಗೆ ನೃತ್ಯವನ್ನು ಪಸರಿಸುವುದು ಮತ್ತು ಅದರ ಮೌಲ್ಯವನ್ನು ಸಾರುವ ಕೇಂದ್ರವಾಗಲಿದೆ.

ಮೈಸೂರಿನ ವಿನೋಬ ರಸ್ತೆಯಲ್ಲಿರುವ ಕಲಾಮಂದಿರ ಸಭಾಭವನದಲ್ಲಿ ಡಿಸೆಂಬರ್ 31 ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಹರಿ 9845888626, ಚೇತನಾ 9986015213 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: