ಸುದ್ದಿ ಸಂಕ್ಷಿಪ್ತ

ಸೆ.9ರಂದು ಶ್ರಾವಣಮಾಸದ ಪ್ರವಚನ ಸಮಾರೋಪ

ಮೈಸೂರು,ಸೆ.7 : ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿದ್ದ ಶ್ರಾವಣಮಾಸದ ಪ್ರವಚನದ ಸಮಾರೋಪ ಸಮಾರಂಭವನ್ನು ಸೆ.9ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.

ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ಅಧ್ಯಕ್ಷ ಸಿ.ಎಸ್.ಗುರುಮಲ್ಲಪ್ಪ ಅಧ್ಯಕ್ಷತೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: