ಸುದ್ದಿ ಸಂಕ್ಷಿಪ್ತ

ಕಶೀರ ಸಂವಾದ ನಾಳೆ

ಮೈಸೂರು,ಸೆ.7 : ಶ್ರೀನಿಧಿ ಪುಸ್ತಕಗಳು ಮತ್ತು ಮಂಥನ (ಲೇಖನ ಚಿಂತಕರ ಬಳಗ) ಸಹಯೋಗದಲ್ಲಿ ಲೇಖಕಿ ಸಹನಾ ವಿಜಯಕುಮಾರ್ ಅವರ ಕಾಶ್ಮೀರದ ವಿದ್ಯಮಾನಗಳ ಬಹು ಚರ್ಚಿತ ಕಾದಂಬರಿ) ಕಶೀರ  ಬಗ್ಗೆ ಸಂವಾದವನ್ನು ನಾಳೆ(8)ರ ಸಂಜೆ 6 ರಿಂದ 7.30ರವರೆಗೆ ಜೆಎಲ್ ಬಿ ರಸ್ತೆಯ ಮಾಧವ ಕೃಪದಲ್ಲಿ ಏರ್ಪಡಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಆರ್.ವಸುದೇವ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಶ್ಮೀರ ಪ್ರಚಲಿತ ವಿದ್ಯಮಾನಗಳು ಹಾಗೂ ಪುಸ್ತಕ ಕುರಿತು ವಾಗ್ಮಿ ಪ್ರೇಮ ಶೇಖರ್ ಮಾತನಾಡಲಿದ್ದಾರೆ. ಸಂವಾದದಲ್ಲಿ ಲೇಖಕಿ ಸಹನಾ ವಿಜಯಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: