ಸುದ್ದಿ ಸಂಕ್ಷಿಪ್ತ

ಸೆ.9 ಕ್ಕೆ `ಪರಿಣಾಮಕಾರಿ ನ್ಯಾಯ ವಿತರಣೆಯಲ್ಲಿ ಪಾಲುದಾರರ ಪಾತ್ರ’ ಕುರಿತು ಕಾರ್ಯಾಗಾರ

ಮೈಸೂರು,ಸೆ.7-ಮೈಸೂರು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್, ಸರ್ಕಾರಿ ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಪ್ರಯೋಗಾಲಯ, ಭೂ, ಗಣಿ ಮತ್ತು ಖನಿಜ ಇಲಾಖೆ ಮತ್ತು ವಿಧಿ ವಿಜ್ಞಾನ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಸೆ.9 ರಂದು ಬೆಳಿಗ್ಗೆ 9.30ಕ್ಕೆ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ `ಪರಿಣಾಮಕಾರಿ ನ್ಯಾಯ ವಿತರಣೆಯಲ್ಲಿ  ಪಾಲುದಾರರ  ಪಾತ್ರ’ ಎಂಬ ಶೀರ್ಷಿಕೆಯಡಿಯಲ್ಲಿ  ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಸದರಿ ಕಾರ್ಯಕ್ರಮದಲ್ಲಿ ಭೂ ಗಣಿ ಮತ್ತು ಖನಿಜ ನಿಯಂತ್ರಣ ಕಾಯ್ದೆ, ಪೋಕ್ಸೊ ಕಾಯ್ದೆ (POCSO),
ಸೈಬರ್ ಕ್ರೈಂ, ವಿಧಿ ವಿಜ್ಞಾನ  ಮತ್ತು ಇತರೆ ಕಾನೂನು ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.

ದಕ್ಷಿಣ ವಲಯದ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ವಿ.ಶರತ್‍ಚಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ, ಜಿಲ್ಲಾಧಿಕಾರಿ  ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಎ.ಸುಬ್ರಮಣೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಎಂಎಂಸಿ ಮತ್ತು ಆರ್‍ಐ ಡೀನ್ ಮತ್ತು ನಿರ್ದೇಶಕರಾದ ಡಾ.ನಾಗರಾಜು, ಹಿರಿಯ ಕಾನೂನು ಅಧಿಕಾರಿ ಧರಣ್ಣೆನವರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಬಸವರಾಜು ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: