
ಕರ್ನಾಟಕಪ್ರಮುಖ ಸುದ್ದಿಮೈಸೂರು
ನಟ ಚೇತನ್ ರಾಮ್ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಚಿತ್ರರಂಗದ ಹಿರಿಯ ನಟ ಚೇತನ್ ರಾಮ್ ರಾವ್ ಅವರ ಮನೆಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚೇತನ್ ರಾಮ್ ಅವರ ಅಂತಿಮ ದರ್ಶನ ಪಡೆದರು.
ಮೈಸೂರಿನ ತೊಣಚಿಕೊಪ್ಪಲಿನಲ್ಲಿರುವ ಚೇತನ್ ಅವರ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚೇತನ್ ಪತ್ನಿ, ಮಕ್ಕಳು ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳಿದರಲ್ಲದೇ, ಭಗವಂತ ನಿಮಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದರು.
ಈ ಸಂದರ್ಭ ಚೇತನ್ ರಾಮ್ ಅವರು ನಡೆದು ಬಂದ ಹಾದಿ, ಅವರ ಚಿತ್ರರಂಗದ ಜೀವನವನ್ನು ನೆನಪಿಸಿಕೊಂಡರು. ಚೇತನ್ ಅವರನ್ನು ಇಂದು ಚಿತ್ರರಂಗ ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಈ ಸಂದರ್ಭ ಸಚಿವ ಮಹದೇವಪ್ಪ ಮುಖ್ಯಮಂತ್ರಿಗಳ ಜೊತೆಗಿದ್ದರು.