ಪ್ರಮುಖ ಸುದ್ದಿಮೈಸೂರು

ಜ.2ರಂದು ಬಿಜೆಪಿ ಪಕ್ಷ ಸೇರುತ್ತೇನೆ: ಶ್ರೀನಿವಾಸ್ ಪ್ರಸಾದ್

ಜ.2ರಂದು ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಶನಿವಾರದಂದು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.

ನನ್ನ ರಾಜಕೀಯ ಜೀವನದ ಕೊನೆಯ ದಿನಗಳಲ್ಲಿ ಸ್ವಾಭಿಮಾನದ ನಿರ್ಧಾರ ಕೈಗೊಂಡಿದ್ದೇನೆ. ಬಿ.ಎಸ್‍.ಯಡಿಯೂರಪ್ಪ ಅವರು ತುಂಬಾ ಪ್ರೀತಿಯಿಂದ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅವರ ಆಹ್ವಾನವನ್ನು ಸ್ವೀಕರಿಸಿ ಬಹಳ ಸಂತೋಷದಿಂದ ಜ.2 ರಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರುತ್ತೇನೆ. ನನ್ನ ಬೆಂಬಲಿಗರಿಗೂ ಈ ನಿರ್ಣಯ ಸಂತಸ ತಂದಿದೆ ಎಂದು ಹೇಳಿದರು.

ಬಿ.ಎಸ್‍. ಯಡಿಯೂರಪ್ಪ ಅವರು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿ ಸೇರಲಿದ್ದು, ನಮಗೆ ಆನೆಬಲ ಬಂದಂತಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿಗೆ ಸೇರುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಚಿಂತಿತರಾಗಿದ್ದಾರೆ. ನಂಜನಗೂಡು ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶ್ರೀನಿವಾಸ್ ಪ್ರಸಾದ್ ಅವರು ಸ್ಪರ್ಧಿಸಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರು ಪಕ್ಷಕ್ಕೆ ಸೇರಿದ ಬಳಿಕ ಇನ್ನಷ್ಟು ಮಂದಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಜ.2ರಂದು ಪಕ್ಷಕ್ಕೆ ಸೇರಲಿದ್ದು, ಅಂದು ಬಿಜೆಪಿಯ ಎಲ್ಲ ಮುಖಂಡರೂ ಪಕ್ಷದ ಕಚೇರಿಯಲ್ಲಿ ಹಾಜರಿದ್ದು, ಶ್ರೀನಿವಾಸ್ ಪ್ರಸಾದ್ ಅವರನ್ನು ಸ್ವಾಗತಿಸಲಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಸಚಿವ ರಾಮದಾಸ್ ಮತ್ತು ಮಲ್ಲಿಕಾರ್ಜುನಪ್ಪ ಅವರೊಂದಿಗೆ ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಮಾಜಿ ಸಚಿವ ಶ‍್ರೀನಿವಾಸ್ ಪ್ರಸಾದ್ ನಿವಾಸಕ್ಕೆ ತೆರಳಿ ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದರು.

shrinivas-prasad-1

Leave a Reply

comments

Related Articles

error: