ಕರ್ನಾಟಕಪ್ರಮುಖ ಸುದ್ದಿ

ಹವಾಲಾ ದಂಧೆ ಆರೋಪ: ರೌಡಿಶೀಟರ್ ಸೈಕಲ್ ರವಿ ವಿರುದ್ಧ ಎಫ್ಐಆರ್

ಬೆಂಗಳೂರು (ಸೆ.8): ನಗರದಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ 30 ಪ್ರಕರಣಗಳ ಆರೋಪಿ ಸೈಕಲ್ ರವಿ ಮೇಲೆ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿದೆ. ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಸೈಕಲ್ ರವಿಯನ್ನ ಸಿಸಿಬಿ ಪೊಲೀಸರು ಜೂ.27ರಂದು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು. ಆದ್ರೆ ಇದೀಗ ರವಿ ಬನಶಂಕರಿ ಪೊಲೀಸರ ವಶದಲ್ಲಿದ್ದಾನೆ.

ಅಕ್ರಮ ಆಸ್ತಿ, ಹವಾಲ ದಂಧೆಯಲ್ಲಿ ಸೈಕಲ್ ರವಿ ತೊಡಗಿರುವ ಬಗ್ಗೆ ತನಿಖೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ಬಳಿಕ ಆರೋಪಿ ಮೇಲೆ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿದೆ. ಇನ್ನು ಸೈಕಲ್ ರವಿ ಜೊತೆ ರಾಜಕಾರಣಿಗಳು ಮತ್ತು ಸಿನಿಮಾ ನಟರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ. (ಎನ್.ಬಿ)

Leave a Reply

comments

Related Articles

error: