
ಮೈಸೂರು
ವಾರ್ಡ್ ನಂ 35ಕ್ಕೆ ತೆರಳಿ ಸಮಸ್ಯೆ ಆಲಿಸಿದ ನೂತನ ಸದಸ್ಯ ಸಾತ್ವಿಕ್
ಮೈಸೂರು,ಸೆ.8:- ಇಂದು ವಾರ್ಡ್ ನಂ 35 ರಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆಯಲ್ಲಿ ಪಾಲಿಕೆಯ ನೂತನ ಸದಸ್ಯರಾದ ಸಾತ್ವಿಕ್ ಹಾಗೂ ಮಾಜಿ ಮೇಯರ್ ಸಂದೇಶ ಸ್ವಾಮಿ ಅವರು ತೆರಳಿ ವಾರ್ಡ್ ನಿವಾಸಿಗಳಿಂದ ಸಮಸ್ಯೆಗಳನ್ನು ಆಲಿಸಿದರು.
ಸಮಸ್ಯೆಗಳನ್ನು ಆಲಿಸಿದರಲ್ಲದೇ, ಸಮಸ್ಯೆಗಳಿಗೆ ಸ್ಪಂದಿಸಿದರು. ಇದೇ ವೇಳೆ ಕೆಲವು ಮೂಲಭೂತ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದು, ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದರು. ಪಕ್ಷದ ಮುಖಂಡರೂ ಕೂಡ ಈ ಸಂದರ್ಭ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)