ಮೈಸೂರು

ಮೂಲಸೌಕರ್ಯಗಳನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.8:- ಮೂಲಸೌಕರ್ಯಗಳನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿ ಗಂಗೋತ್ರಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆಯ ಬಳಿಯಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ವಿವಿ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿನಿಲಯಗಳಲ್ಲಿ ಸಾಂಕ್ರಾಮಿಕ ರೋಗ ಉಂಟಾಗುವ ಭೀತಿ ಎದುರಾಗುತ್ತಿದೆ. ಹಲವು ಕನಸುಗಳನ್ನು ಹೊತ್ತು ವಿದ್ಯಾರ್ಥಿ ಜೀವನವನ್ನು ರೂಪಿಸಿಕೊಳ್ಳಲು ಬಂದಿರುವ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಕೊರತೆ ಕಾಡಿದೆ. ಶೌಚಾಲಯಗಳಲ್ಲಿ ಯಾವುದೇ ಪರಿಕರಗಳನ್ನು ಬಳಸದೇ ನೀರಿನಿಂದ ತೊಳೆದು ಹೋಗುತ್ತಿದ್ದು, ಬಟ್ಟೆ ಒಗೆಯುವ ಜಾಗದಲ್ಲಿ ಪಾಚಿ-ಗಿಡಗಂಟಿಗಳು ಬೆಳೆದಿವೆ. ಕಸ ಸಂಗ್ರಹಣೆ, ವಿಂಗಡಣೆಗೆ ಯಾವುದೇ ವೈಜ್ಞಾನಿಕ ವಿಧಾನ ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು. ಸೊಳ್ಳೆ ಹಾವಳಿ ಹೆಚ್ಚಿದ್ದು, ಔಷಧಿ ಅಥವಾ ಸೊಳ್ಳೆ ಪರದೆ ಅಳವಡಿಸಿ. ಸಮವಸ್ತ್ರ ಇಟ್ಟುಕೊಳ್ಳಲು ಮೊಳೆ ಅಥವಾ ಹ್ಯಾಂಗರ್ ಅಳವಡಿಸಿ, ಜಿಮ್ ಶಾಲೆಯನ್ನು ಪ್ರತಿದಿನ ಕಾರ್ಯನಿರ್ವಹಿಸುವಂತೆ ಮಾಡಿ ಎಂಬಿತ್ಯಾದಿ ಬೇಡಿಕೆಗಲಿಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸುರೇಶ್ ಕೆ.ಎಂ, ರಾಜ್, ನಾಗೇಂದ್ರ, ಗೋವಿಂದರಾಜು, ಚೇತನ್, ಅಜಿತ್,ಸುರೇಶ್ ಶೆರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: