
ಮೈಸೂರು
ಹಾಡಹಗಲೇ ಜೆಡಿಎಸ್ ಕಾರ್ಯಕರ್ತನ ಬರ್ಬರ ಕೊಲೆ
ಹಾಡಹಗಲೇ ಜೆಡಿಎಸ್ ಕಾರ್ಯಕರ್ತನ ಎದೆಗೆ ರಾಡ್ನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಶನಿವಾರ ನಡೆದಿದೆ.
ಬೆನಮನಹಳ್ಳಿ ಗ್ರಾಮದ ಕೇಬಲ್ ಕುಮಾರ್(40) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಬೈಕ್ನಲ್ಲಿ ಬಂದ ಮೂವರು ಕುಮಾರ್ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೊಲೆಗೀಡಾದ ಕುಮಾರ್ ಇತ್ತೀಚಿಗಷ್ಟೇ ಹಲಗೂರಿನಲ್ಲಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹಲಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.