ಕ್ರೀಡೆಮನರಂಜನೆ

`ಕೆಸಿಸಿ’ ಟೂರ್ನಿ ಆರಂಭಕ್ಕೆ ಕ್ಷಣಗಣನೆ: ಸ್ಟಾರ್ ನಟರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗಿ

ಬೆಂಗಳೂರು,ಸೆ.8- ಕೆಸಿಸಿ (ಕರ್ನಾಟಕ ಚಲನಚಿತ್ರ ಕಪ್) ಟೂರ್ನಿ ಆರಂಭ ಕೆಲವೇ ಕ್ಷಣಗಳು ಬಾಕಿ ಇದೆ. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸ್ಟಾರ್ ನಟರ ತಂಡ ಸೆಣಸಲಿವೆ.

ಸ್ಟಾರ್ ನಟರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಒವೇಸ್ ‍ಷಾ, ಗಿಲ್ ಕ್ರಿಸ್ಟ್, ತಿಲಕರತ್ನೆ ದಿಲ್ಶಾನ್ ಕೂಡ ಮೈದಾನಕ್ಕೆ ಇಳಿಯಲಿದ್ದಾರೆ.

ಇಂದಿನ ಮೊದಲ ಪಂದ್ಯ ಮಧ್ಯಾಹ್ನ 1.30ಕ್ಕೆ ಪ್ರಾರಂಭ ಆಗಲಿದೆ. ಮೊದಲ ಪಂದ್ಯ ಸುದೀಪ್ ಹಾಗೂ ಗಣೇಶ್ ತಂಡಗಳ ನಡುವೆ ನಡೆಯಲಿದೆ. ಇಂದು ನಾಲ್ಕು ಹಾಗೂ ನಾಳೆ ಎರಡು ಪಂದ್ಯಗಳು ನಡೆಯಲಿದ್ದು, ನಾಳೆ ರಾತ್ರಿ 8:15ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ಮೊದಲ ಪಂದ್ಯ: ಸುದೀಪ್ (ಕದಂಬ ಲಯನ್ಸ್) v/s ಗಣೇಶ್ (ಒಡೆಯರ್ ಚಾರ್ಜರ್ಸ್), ಎರಡನೇ ಪಂದ್ಯ : ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್) v/s ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್), ಮೂರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಗಣೇಶ್ (ಒಡೆಯರ್ ಚಾರ್ಜರ್ಸ್), ನಾಲ್ಕನೇ ಪಂದ್ಯ: ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್) v/s ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್)

ಐದನೇ ಪಂದ್ಯ : ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್) v/s ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್), ಆರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಸುದೀಪ್ (ಕದಂಬ ಲಯನ್ಸ್) ನಡುವೆ ನಡೆಯಲಿದೆ.

ಟಿಕೆಟ್ ಬೆಲೆ 50 ರೂ.ನಿಂದ ಶುರುವಾಗಿ 5000 ರೂ.ವರಗೆ ಇರಲಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗಲಿದೆ. (ಎಂ.ಎನ್)

Leave a Reply

comments

Related Articles

error: