ಮೈಸೂರು

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ: ತಳ್ಳುವ ಗಾಡಿಯಲ್ಲಿ ಬೈಕ್ ತಳ್ಳಿಕೊಂಡು ಆಕ್ರೋಶ

ಮೈಸೂರು,ಸೆ.8:- ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಖಂಡಿಸಿ ತಳ್ಳುವ ಗಾಡಿಯಲ್ಲಿ ಬೈಕ್ ಹಾಕಿಕೊಂಡು ತಳ್ಳುವ ಮೂಲಕ‌  ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನ್ಯಾಯಾಲಯದ ಮುಂಭಾಗವಿರುವ  ಗಾಂಧೀಜಿ ಪುತ್ಥಳಿ ಮುಂದಿಂದು ಪ್ರತಿಭಟನೆ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಪೆಟ್ರೋಲ್-ಡಿಸೇಲ್ ಸೇರಿದಂತೆ  ತೈಲ ಬೆಲೆ ಗಗನಕ್ಕೆ ಏರಿದೆ‌.ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ದೇಶದ ಜನರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ,ದೇಶದ ಅಭಿವೃದ್ಧಿಗೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರ ಗದ್ದುಗೆ ಹಿಡಿದ ದಿನದಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನಾಲ್ಕೂವರೆ ವರ್ಷ ಕಳೆದರು.ಇಲ್ಲಿಯವರೆಗೂ ಬಡವರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಪೆಟ್ರೋಲ್-ಡಿಸೇಲ್ ಮತ್ತು ಸಿಲೆಂಡರ್ ಬೆಲೆ ಏರಿಕೆ ಮಾಡುವ ಮೂಲಕ ಆರ್ಥಿಕ ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: