ಪ್ರಮುಖ ಸುದ್ದಿಮೈಸೂರು

ಮೈವಿವಿ ಸ್ವಚ್ಚತಾ ಕಾರ್ಮಿಕರ ಸಮಸ್ಯೆ ಶ್ರೀಘ್ರವೇ ಬಗೆಹರಿಸಿ : ಮಾಜಿ ಮೇಯರ್ ನಾರಾಯಣ್

ಉಗ್ರ ಹೋರಾಟದ ಎಚ್ಚರಿಕೆ

ಮೈಸೂರು,ಸೆ.8 : ಮೈಸೂರು ವಿಶ್ವವಿದ್ಯಾಲಯದ ಸ್ವಚ್ಚತಾ ಪೌರಕಾರ್ಮಿರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಷ್ಕರವು ಐದನೇ ದಿನಕ್ಕೇ ಕಾಲಿಸಿದ್ದು, ಕಾರ್ಮಿಕರ ಪ್ರತಿಭಟನೆಗೆ ಇಲ್ಲಿಯವರೆಗೆ ಉದಾಸೀನ ತೋರಿರುವ ವಿವಿಯ ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ನಡೆಯನ್ನು ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ತೀವ್ರವಾಗಿ ಖಂಡಿಸಿದರು.

ಸ್ಥಳೀಯವರೇ ಆದ ಉನ್ನತ ಶಿಕ್ಷಣ ಸಚಿವರು ಈ ಪ್ರತಿಭಟನೆಯನ್ನು ಕಡೆಗಣಿಸಿದ್ದು, ಕೊನೆ ಪಕ್ಷ ಕಾರ್ಮಿಕರ ನ್ಯಾಯಯುತ ಬೇಡಿಕೆಯನ್ನು ಆಲಿಸುವ ವ್ಯವಧಾನವನ್ನು ತೋರಿಲ್ಲ ಎಂದು ಕಿಡಿಕಾರಿ,  ವಿಷಯವಾಗಿ ವಿವಿಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿತ್ತು ಆದರೆ ಐದು ದಿನಗಳು ಕಳೆದರು ಈ ಬಗ್ಗೆ ಒಂದಿಷ್ಟು ಆಸಕ್ತಿಯನ್ನು ಸಚಿವರು ತೋರಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೇವಲ 50 ಜನರನ್ನು ಮಾತ್ರ ಸರ್ಕಾರಿ ಆದೇಶದನ್ವಯ ವೇತನ ನೀಡುತ್ತಿದ್ದು, ಉಳಿದಂತೆ 200 ಜನ ಹೊರಗುತ್ತಿಗೆ ನೌಕರರನ್ನು ಕಾನೂನು ಮೀರಿ ನೇಮಿಸಿಕೊಂಡು ಕಡಿಮೆ ಸಂಬಳ ನೀಡಲಾಗುತ್ತಿದ್ದು. ಸ್ತ್ರೀ-ಪುರುಷರೆಂದು ವೇತನದಲ್ಲಿಯೂ ತಾರತಮ್ಯ ತೋರಿಸಲಾಗುತ್ತಿದೆ, ಸ್ತ್ರೀಯರಿಗೆ ಕೇವಲ 9 ಸಾವಿರ, ಅದರಲ್ಲಿಯೂ ರಜಾದಿನ, ಹಬ್ಬ ಹರಿದಿನಗಳ ಹೆಸರಿನಲ್ಲಿ ಸಂಬಳವನ್ನು ಕಡಿತಗೊಳಿಸುತ್ತಿದ್ದು, ವಿವಿಯೂ ತನ್ನದೇ ಆದ ರಿಪಬ್ಲಿಕ್ ನಿರ್ಮಿಸಿಕೊಂಡು ಸರ್ಕಾರದ ಆದೇಶಗಳನ್ನು ದಿಕ್ಕರಿಸುತ್ತಿದೆ ಎಂದು ದೂರಿದರು.

ಕಾರ್ಮಿಕರಿಗೆ ಕನಿಷ್ಟ ವೇತನ, ಇಎಸ್ಐ ಸೇರಿದಂತೆ ಇನ್ನಿತರೇ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿಯ ಆಡಳಿತ ಮಂಡಳಿ ಶೀಘ್ರವೇ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪೌರ ಕಾರ್ಮಿಕರ ವಿವಿಧ ಸಂಘಟನೆಗಳ ಮುಖಂಡರಾದ ಆಲಗೂಡು ಶಿವಕುಮಾರ್, ಪಳನಿಸ್ವಾಮಿ, ಶಿವಣ್ಣ, ಎನ್.ಮಾರ, ಡಿಎಸ್ಎಸ್ ಮುಖಂಡ ಶಂಭುಲಿಂಗಸ್ವಾಮಿ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: