ಮೈಸೂರು

ಸೆ.17ರಂದು ವಿಶ್ವಕರ್ಮ ಜಯಂತಿ

ನಾಳೆ -ಸೆ.10ರಂದು ಪೂರ್ವಭಾವಿ ಸಭೆ

ಮೈಸೂರು,ಸೆ.8 : ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾ ಒಕ್ಕೂಟದ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿಯನ್ನು ಸೆ.17ರಂದು ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ಹುಚ್ಚಪ್ಪ ಚಾರ್ ತಿಳಿಸಿದರು.

ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಇರ್ವನ್ ರಸ್ತೆಯಲ್ಲಿರುವ ಶ್ರೀಕಾಳಿಕಾಂಬ ಕಮಟೇಶ್ವರ ದೇವಸ್ಥಾನದಲ್ಲಿ ಭಗವಾನ್ ವಿಶ್ವಕರ್ಮಮೂರ್ತಿ ಪೂಜೆ ಸಲ್ಲಿಸಿ ಅಲ್ಲಿಂದ ಮಂಗಳ ವಾಧ್ಯಗಳೊಂದಿಗೆ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕಲಾಮಂದಿರ ತಲುಪಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯು ನ ಪ್ರತಿಭಾವಂತ 25 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು, ಆಸಕ್ತ ವಿದ್ಯಾರ್ಥಿಗಳು ಇಮೇಲ್ [email protected] ಮೂಲಕ ಅಥವಾ ವಾಟ್ಸಪ್ ನಂ 7892163140 ಗೆ ತಮ್ಮ ವಿವರಗಳನ್ನು ಕಳುಹಿಸಿಕೊಡಬಹುದು ಎಂದು ತಿಳಿಸಿದರು.

ಜಯಂತಿ ಅಂಗವಾಗಿ ಸೆ.9ರಂದು ಸಮಾಜದ ಮುಖಂಡರ ಪೂರ್ವಭಾವಿ ಸಭೆಯ ನಡೆಸಯಲಿದೆ, ಅದರಂತೆ ಸೆ.10ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮುಖಂಡರು ಭಾಗವಹಿಸಬೇಕೆಂದು ಇದೇ ಸಂದರ್ಭದಲ್ಲಿ ಕೋರಿದರು.

ಸಮಾಜದ ಮುಖಂಡರಾದ ಡಾ.ಭದ್ರಾಚಾರ್ ದಿಶಾನಿ, ವೆಂಕಟೇಶ್, ಜಯರಾಂ ಚಾರ್, ಪುಟ್ಟರಾಜ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: