ಪ್ರಮುಖ ಸುದ್ದಿ

ಡಿ.ಕೆ.ಸುರೇಶ್ ಬಿಡುಗಡೆ ಮಾಡಿರುವ ಪತ್ರ ನಕಲಿ : ನನ್ನ ಡಿಕೆ ಶಿವಕುಮಾರ್ ಸಂಬಂಧ ಚೆನ್ನಾಗಿಯೇ ಇದೆ : ಬಿಎಸ್ವೈ

ರಾಜ್ಯ(ಬೆಂಗಳೂರು)ಸೆ.8:-  ಸಂಸದ ಡಿ.ಕೆ.ಸುರೇಶ್ ಅವರು ಇಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆಗೆ ಬಿ.ಎಸ್.ಯಡಿಯೂರಪ್ಪನವರು 2017ರ ಜನವರಿ 10ರಂದು ಪತ್ರ ಬರೆದಿದ್ದಾರೆಂದು ಆರೋಪಿಸಿ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಪತ್ರದ ಕುರಿತಂತೆ ಪ್ರತಿಕ್ರಿಯಿಸಿರುವ ಬಿಎಸ್ ವೈ ನಾನು ಆದಾಯ ತೆರಿಗೆ ಇಲಾಖೆಗೆ ಯಾವುದೇ ಪತ್ರವನ್ನೂ ಬರೆದಿಲ್ಲ. ಅದು ನಕಲಿ ಪತ್ರವೆಂದು ಸಮರ್ಥನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಂಸದ ಡಿಕೆ.ಸುರೇಶ್ ಬಿಡುಗಡೆ ಮಾಡಿರುವ ಪತ್ರ ನಕಲಿಯಾಗಿದೆ. ನನ್ನ ಮತ್ತು ಡಿಕೆಶಿವಕುಮಾರ್ ಸಂಬಂಧ 2017ರಿಂದ ಇಲ್ಲಿಯವರೆಗೂ ಚೆನ್ನಾಗಿಯೇ ಇದೆ. ನಾನ್ಯಾಕೆ ಅವರ ವಿರುದ್ಧ ದೂರು ನೀಡಲಿ ಎಂದು ಪ್ರಶ್ನಿಸಿದ್ದಾರೆ. ಸಂಸದರು ಆರೋಪ ಮಾಡುವ ಮೂಲಕ ಹೊಸ ಸುದ್ದಿ ಸೃಷ್ಟಿಸಿ ಗೊಂದಲ ಮೂಡಿಸುತ್ತಿದ್ದಾರೆ. ಈ ಕುರಿತು ಸಂಸದ ಡಿ.ಕೆ.ಸುರೇಶ್ ಅಣ್ಣನ ಬಳಿಯೇ ಕೇಳಲಿ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: