ಮನರಂಜನೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಇನ್ಸ್ಟಾಗ್ರಾಂ ಬ್ಲಾಕ್ : ನನ್ನ ತಪ್ಪೇನಿದೆ ..?

ದೇಶ(ಮುಂಬೈ)ಸೆ.8:- ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿರುತ್ತಾರೆ. ಆದರೆ ಸೋಶಿಯಲ್ ಮಿಡಿಯಾ ಸೈಟ್ ಇನ್ಸ್ಟಾಗ್ರಾಂ ಸುಶಾಂತ್ ಸಿಂಗ್ ಖಾತೆಯನ್ನು ಬ್ಲಾಕ್ ಮಾಡಿದೆ.

ಇದರಿಂದ ಸುಶಾಂತ್ ಸಿಂಗ್ ಸ್ವಲ್ಪ ಚಿಂತಿತರಾಗಿದ್ದಾರಂತೆ. ಇನ್ಸ್ಟಾಗ್ರಾಂ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿ ನನ್ನನ್ನು ಪದೇ ಪದೇ ಯಾಕೆ ಬ್ಲಾಕ್ ಮಾಡುತ್ತೀರಿ, ನಾನು ನನ್ನ ಅಭಿಮಾನಿಗಳಿಗೆ ನೈಜ ಸಮಯದಲ್ಲಿ ಉತ್ತರಿಸುತ್ತೇನೆ. ನನ್ನ ಗುರುತೂ ಕೂಡ ನಿಜವಾದದ್ದೇ. ನಾನು ನಕಲಿಯಲ್ಲ ಎಂದಿದ್ದಾರೆ. ನಾನು ನನ್ನ ಸ್ನೇಹಿತರ ಪ್ರತಿ ಪ್ರಶ್ನೆಗೂ ಪ್ರತಿಕ್ರಿಯಿಸುತ್ತೇನೆ ಇದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಷನ್ ಗಳು ನಡೆಯುತ್ತಿದ್ದರೆ ಅವುಗಳನ್ನು ಕೆಲವು ದಿನಗಳವರೆಗೆ ಬ್ಲಾಕ್ ಮಾಡಲಾಗುತ್ತದೆ ಎನ್ನಲಾಗಿದ್ದು, ಸುಶಾಂತ್ ಸ್ಥಿತಿಯೂ ಅದೇ ಆಗಿದೆ ಎನ್ನಲಾಗಿದೆ. ಅವರ ಪ್ರೊಪೈಲ್ ನಲ್ಲಿ ವಿಸಿಟರ್ಸ್ ಸಂಖ್ಯೆ ಹೆಚ್ಚಿದ್ದು, ಇದರಿಂದ ಬ್ಲಾಕ್ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: