ಮೈಸೂರು

ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಎಐಟಿಯುಸಿಯಿಂದ 7 ಲಕ್ಷಕ್ಕೂ ಅಧಿಕ ದೇಣಿಗೆ

ಮೈಸೂರು,ಸೆ.8 : ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಜಲಪ್ರಳಯದಿಂದ ನಲುಗಿರುವ ರಾಜ್ಯದ ಕೊಡಗು ಹಾಗೂ ನೆರೆಯ ಕೇರಳದ ಸಂತ್ರಸ್ಥರಿಗೆ ದೇಣಿಗೆಯನ್ನು ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ನೀಡಲಾಗಿದೆ.

ಎರಡೂ ರಾಜ್ಯಗಳ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 7 ಲಕ್ಷದ 65 ಸಾವಿರದ 352 ರೂಗಳನ್ನು ಸೆ.7ರಂದು ಜಿಲ್ಲಾಧಿಕಾರಿಗಳಿಗೆ ಚೆಕ್ ಹಾಗೂ ಡಿಡಿ ಮೂಲಕ ದೇಣಿಗೆ ಸಲ್ಲಿಸಲಾಗಿದೆ.

ಈ ಸಂದರ್ಭದ್ಲಲಿ ಜಿಲ್ಲಾ ಉಪಪ್ರಧಾನ ಕಾರ್ಯದರ್ಶಿ ಹೆಚ್.ಬಿ.ರಾಮಕೃಷ್ಣ, ಉಪಾಧ್ಯಕ್ಷ ಕೆ.ಜಿ.ಸೊಮರಾಜೇಅರಸ್, ಕಾರ್ಯದರ್ಶಿ ಬಸವರಾಜು, ಕಚೇರಿ ಕಾರ್ಯದರ್ಶಿ ರಾಮ, ಸಿ.ಎ.ಬಾಪೂಜಿ, ಕುಮಾರ್, ರಮೇಶ್,ಮೈಪಾಲ್, ರಘು, ನಂಜಪ್ಪ, ಬೆಟ್ಟೇಗೌಡ, ವಿಠ್ಠಲ, ಬೋರುಕ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: