ಮೈಸೂರು

ಹಿರಿಯ ಸಾಹಿತಿ ಬಿ.ಶಾಮಸುಂದರ ಅವರಿಗೆ ವೀರ ಮಡಿವಾಳ ಸಂಘದಿಂದ ಸನ್ಮಾನ

2016ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಮತ್ತು ಪಾಲಿಕೆ ಮಾಜಿ ಸದಸ್ಯ ಬಿ.ಶಾಮಸುಂದರ ಅವರಿಗೆ ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘದಿಂದ ಶನಿವಾರ ಪತ್ರಕರ್ತರ ಭವನದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಶಾಮಸುಂದರ ಅವರು, ಅವಿದ್ಯಾವಂತರೇ ಹೆಚ್ಚಿರುವ ಮಡಿವಾಳ ಸಮಾಜದಲ್ಲಿ ನನ್ನನ್ನು ಗುರುತಿಸಿರಲಿಲ್ಲ ಹಾಗೂ ಸಮಾಜದಿಂದ ಸನ್ಮಾನ ಮಾಡಿರಲಿಲ್ಲ ಎನ್ನುವ ಕೊರಗಿತ್ತು. ಆ ಆಸೆ ಇಂದು ಈಡೇರಿತು ಎಂದು ಸಂತಸ ಹಂಚಿಕೊಂಡರು. ಅಜ್ಞಾನ, ಅರಿವಿನ ಕೊರತೆ ಹಾಗೂ ಒಗ್ಗಟ್ಟಿಲ್ಲದೆ ಸಮಾಜವು ಹಿಂದುಳಿದಿದೆ. ಬೇರೆ ಬೇರೆ ಸಮಾಜದೊಂದಿಗೆ ಬೆರೆತು ನಾಗರೀಕತೆಯನ್ನು ಕಲಿಯಬೇಕು ಎಂದು ತಿಳಿಸಿ, ಸರ್ಕಾರವು ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಮುಂದಿನ ಪೀಳಿಗೆಯನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ವಸಂತ ಕುಮಾರಿ, ಕಾರ್ಯಾಧ್ಯಕ್ಷ ಎಸ್.ಜೆ. ಪ್ರಶಾಂತ್, ಉಪಾಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಖಜಾಂಜಿ ಸಿದ್ದಪ್ಪಾಜಿ, ಮೈಸೂರು ತಾಲೂಕು ಅಧ್ಯಕ್ಷ ಜಯರಾಮ್ ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Leave a Reply

comments

Related Articles

error: