ಸುದ್ದಿ ಸಂಕ್ಷಿಪ್ತ

ಸೆ.16ರಂದು ಜೆಎಸ್ಎಸ್ ವಧೂ-ವರರ ಸಮಾವೇಶ

ಮೈಸೂರು,ಸೆ.8 : ಜೆಎಸ್ಎಸ್ ವಿವಾಹ ವೇದಿಕೆಯು ಪ್ರತಿ ತಿಂಗಳ ಮೂರನೇ ಭಾನುವಾರದಂದು ನಡೆಸುವ ವಧೂ-ವರರ ಮುಖಾಮುಖಿ ಸಮಾವೇಶವನ್ನು ಸೆ.16ರ ಬೆಳಗ್ಗೆ 10 ಗಂಟೆಗೆ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಆಸಕ್ತರು ಸಮಾವೇಶದಲ್ಲಿ ಬಾಗವಹಿಸಬಹುದಾಗಿದ್ದು ನೊಂದಾಣಿಗಾಗಿ ದೂ.ಸಂ. 0821 2430322, 9611070674 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: