ಪ್ರಮುಖ ಸುದ್ದಿ

ಸ್ಪಂದನಾ ರೋಟರ್ಯಾಕ್ಟ್ ಘಟಕಕ್ಕೆ ಚಾಲನೆ

ರಾಜ್ಯ(ಮಡಿಕೇರಿ)ಸೆ.9:- ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ಸ್ಪಂದನಾ ರೋಟರ್ಯಾಕ್ಟ್ ಘಟಕಕ್ಕೆ ಚಾಲನೆ ನೀಡಲಾಯಿತು.

ರೋಟರ್ಯಾಕ್ಟ್ ಘಟದ ಅಧ್ಯಕ್ಷ ಎನ್.ಕೆ.ಮನು ಮತ್ತು ಪದಾಧಿಕಾರಿಗಳಿಗೆ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರಿ ನಾರಾಯಣ ಅವರು, ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಅವರು ಮಾತನಾಡಿ, ರೋಟರ್ಯಾಕ್ಟ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರೆ, ನಾಯಕತ್ವ ಗುಣಗಳು ಮತ್ತು ಸೇವಾ ಮನೋಭಾವನೆ ಮೂಡುತ್ತದೆ. ಸಮಾಜದಲ್ಲಿ ಯಾವುದೇ ಕ್ಷೇತ್ರ ಕಲುಷಿತಗೊಂಡರೆ ಸಹಿಸಬಹುದು. ಆದರೆ, ಶಿಕ್ಷಣ ಕ್ಷೇತ್ರ ಕಲುಷಿತವಾದಲ್ಲಿ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ ಎಂದರು. ರೋಟಾರ್ಯಾಕ್ಟ್ 1968ರಲ್ಲಿ ಪ್ರಾರಂಭವಾಗಿದ್ದು, 162 ರಾಷ್ಟ್ರಗಳಲ್ಲಿ ವಿಸ್ತರಿಸಿದೆ. 9522 ಘಟಕಗಳಿದ್ದು, 2.91 ಲಕ್ಷ 18ರಿಂದ 30 ವರ್ಷದೊಳಗಿನ ಸದಸ್ಯರಿದ್ದಾರೆ ಎಂದು ಹೇಳಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯೊಂದಿಗೆ ಸೇವಾ ಮನೋಭಾವದಿಂದ ಕೆಲಸ ಮಾಡಿದರೆ, ಸಾಧನೆಯ ಮೆಟ್ಟಿಲೇರಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ, ಪದಾಧಿಕಾರಿಗಳಾದ ಪಿ. ನಾಗೇಶ್, ರಾಕೇಶ್ ಪಟೇಲ್, ಶುಭಾಕರ್, ಜಿಲ್ಲಾ ರೋಟರಿ ಪ್ರತಿನಿಧಿ ಮಂಜೇಶ್, ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಶರಣ್ ಇದ್ದರು. ಇದೆ ಸಂದರ್ಭ ಉಪಾಧ್ಯಕ್ಷರಾಗಿ ಜಿ.ಕೆ.ಯೋಗೇಶ್, ಕಾರ್ಯದರ್ಶಿಯಾಗಿ ಎಸ್.ಕುಮಾರ್, ಖಜಾಂಚಿಯಾಗಿ ಬಿ.ಎ.ತುಳಸಿ ಆಯ್ಕೆಯಾದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: