ಪ್ರಮುಖ ಸುದ್ದಿ

ಸಂತ ಲಾರೆನ್ಸ್ ಚರ್ಚ್‍ನಲ್ಲಿ ಸಂಭ್ರಮದ ಮಾತೆ ಮರಿಯಮ್ಮ ಹಬ್ಬ ಆಚರಣೆ

ರಾಜ್ಯ(ಮಡಿಕೇರಿ)ಸೆ.8:- ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್‍ನಲ್ಲಿ ಮಾತೆ ಮರಿಯಮ್ಮ ಅವರ ಹಬ್ಬವನ್ನು ಕ್ರಿಶ್ಚಿಯನ್ ಬಾಂಧವರು ಸಡಗರದಿಂದ ಆಚರಿಸಿದರು.

ಕುಶಾಲನಗರದ ತಪೋವನ ಸಂಸ್ಥೆಯ ಗುರುಗಳಾದ ಜೀವನ್ ತೌವ್ರ್ ಅವರು ಹಬ್ಬದ ಅಂಗವಾಗಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಹೊಸ ಬೆಳೆಯಾದ ಭತ್ತದ ಕದಿರನ್ನು ಪೂಜಿಸಿ, ಭಕ್ತಾದಿಗಳಿಗೆ ವಿತರಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: