ಮೈಸೂರು

ಉಚಿತ ಕಣ್ಣಿನ ತಪಾಸಣಾ ಶಿಬಿರ

ಶ್ರೀಕೃಷ್ಣ ರಾಜೇಂದ್ರ ಸಹಕಾರ ಬ್ಯಾಂಕ್‍ ನಿಯಮಿತದಲ್ಲಿ ಬ್ಯಾಂಕ್ ಸಿಬ್ಬಂದಿ, ಸದಸ್ಯರು ಹಾಗೂ ಕುಟುಂಬ ವರ್ಗದವರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಹೆಚ್.ವಾಸು ತಿಳಿಸಿದರು.

ಅವರು ಶನಿವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಡಿ.27ರ ಮಂಗಳವಾರ ಬೆಳಗ್ಗೆ 9.30 ರಿಂದ ಸಂಜೆಯವರೆಗೂ ಬ್ಯಾಂಕಿನ ಆವರಣದಲ್ಲಿ ಶಿಬಿರವನ್ನು ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ 0821-2520894, 9845922689 ಹಾಗೂ 974070858 ಅನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ವಿ.ಭಾಸ್ಕರ್, ನಿರ್ದೇಶಕರಾದ ನಂ.ಸಿದ್ದಪ್ಪ, ತಾಯೂರು ವಿಠ್ಠಲಮೂರ್ತಿ, ಎಂ.ಡಿ.ಪಾರ್ಥಸಾರಥಿ, ಇಂದಿರಾ ವೆಂಕಟೇಶ್ ಇದ್ದರು.

Leave a Reply

comments

Related Articles

error: