ಪ್ರಮುಖ ಸುದ್ದಿ

ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಮಹಾಸಭೆ : ಆರ್ಥಿಕ ಪ್ರಗತಿ ಕುರಿತು ಸಮಾಲೋಚನೆ

ರಾಜ್ಯ(ಮಡಿಕೇರಿ) ಸೆ.9 : – ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‍ನ ವಾರ್ಷಿಕ ಮಹಾಸಭೆ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಗದೀಶ್, ಕಳೆದ ಆರ್ಥಿಕ ವರ್ಷದಲ್ಲಿ 105.72 ಕೋಟಿ ರೂ.ಗಳ ವಹಿವಾಟು ನಡೆಸುವುದರೊಂದಿಗೆ 24.32 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.14ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದರು.

ಬ್ಯಾಂಕ್ ಪ್ರಸಕ್ತ 2297 ಮಂದಿ ಸದಸ್ಯರುಗಳನ್ನು ಹೊಂದಿದ್ದು,  ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ ರೂ.101.30 ಲಕ್ಷ ಸಂಗ್ರಹವಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ  ರೂ. 3121.20 ಲಕ್ಷದಷ್ಟಿದ್ದು, ಕಳೆದ ಸಾಲಿಗಿಂತ ರೂ.210.30 ಲಕ್ಷದಷ್ಟು ಅಧಿಕಗೊಂಡಿದೆ ಎಂದು ತಿಳಿಸಿದರು. ಬ್ಯಾಂಕು 2017-18ನೇ ಸಾಲಿಗೆ ಒಟ್ಟಾರೆ 49.14 ಲಕ್ಷದಷ್ಟು ಲಾಭಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರ ಬಾಪ್ತುಗಳಿಗೆ ಕಾಯ್ದಿರಿಸಿದ ಬಳಿಕ 24.32 ಲಕ್ಷ ರೂ.ಗಳ ಲಾಭ ಗಳಿಸಿದೆ ಎಂದು ಜಗದೀಶ್ ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಸತೀಶ್, ನಿರ್ದೇಶಕರುಗಳಾದ ಎಂ.ಪಿ.ಮುತ್ತಪ್ಪ, ಕೋಡಿ ಚಂದ್ರಶೇಖರ್, ಇಗ್ಗುಡ ಶಿವಕುಮಾರಿ ಗಣಪತಿ, ಬಿ.ಎಂ.ರಾಜೇಶ್, ಸಿ.ಕೆ.ಬಾಲಕೃಷ್ಣ, ಕಾವೇರಮ್ಮ ಸೋಮಣ್ಣ, ಸತೀಶ್ ಪೈ, ಬಿ.ವೈ.ರಾಜೇಶ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಬ್ಯಾಂಕ್‍ನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿ  ಪ್ರೋತ್ಸಾಹ ಧನ ನೀಡಲಾಯಿತು. (ಕೆಸಿಐ,ಎಸ್.ಎಚ್)

 

Leave a Reply

comments

Related Articles

error: