ಪ್ರಮುಖ ಸುದ್ದಿ

ಶಾಸಕ ಡಿ. ವೇದವ್ಯಾಸ್ ಕಾಮತ್ ಗೆ ಸನ್ಮಾನ

ರಾಜ್ಯ(ಮಂಗಳೂರು)ಸೆ.10:- ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋಧೇಶ ಸೌಹಾರ್ದ ಸಹಕಾರಿ ( ನಿಯಮಿತ ) ಇದರ 2017-18 ನೇ ಸಾಲಿನ 8 ನೇ ವಾರ್ಷಿಕ ಸಾಮಾನ್ಯ ಸಭೆಯು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಜರುಗಿತು.

ಈ ಸಂದರ್ಭ ಬ್ಯಾಂಕಿನ ಸ್ಥಾಪಕ ಡೈರೆಕ್ಟರ್ ಹಾಗೂ ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.  ಬ್ಯಾಂಕಿನ  ಅಧ್ಯಕ್ಷರಾದ ಸತೀಶ್ ನಾಯಕ್ ಹಾಗೂ ಇತರ ಪದಾಧಿಕಾರಿಗಳು ಸೇರಿ ಶಾಸಕರಿಗೆ ಶಾಲು ಹೊದಿಸಿ, ಹಾರಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀ  ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಿ. ಎಲ್. ಶೆಣೈ,  ಜಿ. ಯಸ್. ಬಿ. ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ  ಸಿ. ಎ. ಎಂ ಜಗನ್ನಾಥ್ ಕಾಮತ್, ತೋನ್ಸೆ ಗಣಪತಿ ಪೈ, ನಾಗೇಶ್ ಪೈ, ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠವಾದ ಕೊಂಚಾಡಿ ಶ್ರೀ ವೆಂಕಟರಮಣ ದೇವಳದ ಜಿ. ರತ್ನಕರ್ ಕಾಮತ್, ಕೊಡುಗೈ ದಾನಿ ಎಂ. ಪುಂಡಲೀಕ್ ಶೆಣೈ,ಎಂ. ನರೇಶ್ ಶೆಣೈ, ಬಂಟ್ವಾಳದ ಉದ್ಯಮಿ ವಿಜಯಾನಂದ ಶೆಣೈ,ಬ್ಯಾಂಕಿನ ಮಹಾ ಪ್ರಬಂಧಕ ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: