ಕ್ರೀಡೆ

ಮೂರನೇ ಬಾರಿ ಯುಎಸ್ ಓಪನ್ ಟೂರ್ನಿಗೆ ಮುತ್ತಿಕ್ಕಿದ ನೊವಾಕ್ ಜೊಕೊವಿಕ್

ನ್ಯೂಯಾರ್ಕ್,ಸೆ.10-ಯುಎಸ್ ಓಪನ್ ಟೂರ್ನಿಯಲ್ಲಿ ಸೆರ್ಬಿಯನ್ ಆಟಗಾರ ನೊವಾಕ್ ಜೊಕೊವಿಕ್ ಮೂರನೇ ಬಾರಿ ಯುಎಸ್ ಓಪನ್ ಟೂರ್ನಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.

ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸವಾಲನ್ನು 6-3, 7-6 (4), 6-3 ನೇರ ಸೆಟ್ಗಳಿಂದ ಸದೆಬಡಿದ ಜೊಕೊವಿಕ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಜೊಕೊವಿಕ್ ಗೆ ಇದು 14ನೇ ಗ್ರ್ಯಾಂಡ್ಸ್ಲಾಂ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅತಿಹೆಚ್ಚು ಗ್ರ್ಯಾಂಡ್ಸ್ಲಾಂ ಸಿಂಗಲ್ಸ್ ಗೆದ್ದ ಆಟಗಾರರ ಪೈಕಿ ಪೀಟ್ ಸಾಂಪ್ರಸ್ ಜತೆ ಮೂರನೇ ಸ್ಥಾನಕ್ಕೆ ಜಿಗಿದರು.

ಆಸ್ಟ್ರೇಲಿಯಾ ಓಪನ್ ಬಳಿಕ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೊಕೊವಿಕ್, ಸತತ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಮೂರನೇ ಪ್ರಶಸ್ತಿ ಗೆದ್ದರು. ಇದಕ್ಕೂ ಮುನ್ನ ಪ್ರಸಕ್ತ ಋತುವಿನಲ್ಲಿ ವಿಂಬಲ್ಡನ್ ಮತ್ತು ಫ್ಲಶಿಂಗ್ ಮೆಡೋಸ್ ಪ್ರಶಸ್ತಿಗೆ ಜೊಕೊವಿಕ್ ಪಾತ್ರರಾಗಿದ್ದರು. 2016 ಇದೇ ಅವಧಿಯಲ್ಲಿ ಜೊಕೊವಿಕ್ ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಗ್ರ್ಯಾಂಡ್ಸ್ಲಾಂ ಮಿಷಿನ್ ಎನಿಸಿಕೊಂಡಿದ್ದರು.

ಆರನೇ ಶ್ರೇಯಾಂಕದ ಆಟಗಾರ ಜೊಕೊವಿಕ್ ಇಡೀ ಟೂರ್ನಿಯಲ್ಲಿ ಎರಡು ಸೆಟ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಎರಡನೇ ಸುತ್ತಿನ ಬಳಿಕ ಜೊಕೊವಿಕ್ ಒಂದು ಸೆಟ್ ಕೂಡ ಬಿಟ್ಟುಕೊಟ್ಟಿಲ್ಲ. ಪೀಟ್ ಸಾಂಪ್ರಸ್ 14ನೇ ಗ್ರ್ಯಾಂಡ್ಸ್ಲಾಂ ಗೆದ್ದ ಕೋರ್ಟ್ನಲ್ಲೇ ಫೈನಲ್ ಆಡಿದ ಜೊಕೊವಿಕ್ ಅವರ ಸಾಧನೆಯನ್ನು ಸರಿಗಟ್ಟಿದ್ದು ವಿಶೇಷ. (ಎಂ.ಎನ್)

Leave a Reply

comments

Related Articles

error: