ಮೈಸೂರು

ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಸ್ಥೆಯ ವಾರ್ಷಿಕೋತ್ಸವ ಡಿ.27ರಂದು

ಮೈಸೂರು ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್‍ ಅಸೋಸಿಯೇಷನ್‍ನ 16ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ‘ಛಾಯಾ ಸಂಜೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಮುಕುಂದ ಸಿಂಗ್ ತಿಳಿಸಿದರು.

ಅವರು, ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿ.27ರ ಮಂಗಳವಾರ ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಎಂ.ಕೆ. ಸೋಮಶೇಖರ್ ಆಧ್ಯಕ್ಷತೆ ವಹಿಸುವರು. ಶಾಸಕ ಜಿ.ಟಿ. ದೇವೇಗೌಡ ಹಾಗೂ ಮಹಾಪೌರ ಎಂ.ಜೆ. ರವಿಕುಮಾರ್ ಮುಖ್ಯ ಅತಿಥಿಗಳಾಗಿರುವರು.

ಈ ಸಂದರ್ಭದಲ್ಲಿ ಡೈರಿ, ದಿನಚರಿ ಬಿಡುಗಡೆ, ಕ್ರಿಕೆಟ್, ಕಬಡ್ಡಿ, ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ನುರಿತ ತಂತ್ರಜ್ಞರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಡಾ.ನಟಶೇಖರ್ ಅವರಿಂದ ಸುಗಮಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಬೆಳಗ್ಗೆ ಉಚಿತ ಕ್ಯಾಮರಾ ಸರ್ವೀಸ್, ಆರೋಗ್ಯ ತಪಾಸಣಾ ಶಿಬಿರ ಹಾಗೂ ‘ಮದುವೆ ಫೋಟೋ’ ವಿಷಯವಾಗಿ ಸ್ಪರ್ಧೆ ನಡೆಯಲಿದ್ದು ಅಂದೇ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ್ ಎಸ್, ಎಂ.ಜೆ. ಶ್ರೀನಿವಾಸ್, ಹೆಚ್.ಪಿ. ನಾರಾಯಣ, ರಾಜೇಂದ್ರ ಉಪಸ್ಥಿತರಿದ್ದರು.

Leave a Reply

comments

Related Articles

error: