ಕರ್ನಾಟಕ

ಪೆಟ್ರೋಲ್ ಬೆಲೆ ಏರಿಕೆ: ಉಡುಪಿಯಲ್ಲಿ ರಿಕ್ಷಾ ಚಾಲಕರಿಂದ ವಿನೂತನ ಪ್ರತಿಭಟನೆ

ಉಡುಪಿ (ಸೆ.10): ದೇಶದಲ್ಲಿ ಅನಿಯಂತ್ರಿತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್ ಅನ್ನು ಬೆಂಬಲಿಸಿ ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.

ಆಶ್ರಯದಾತ ಆಟೋ ಯೂನಿಯನ್ ಅಧೀನದಲ್ಲಿ ಓಡಾಟ ನಡೆಸುವ ಆಟೊ ರಿಕ್ಷಾಗಳ ಚಾಲಕರು ತಮ್ಮ ರಿಕ್ಷಾಗಳನ್ನು ತಳ್ಳಿಕೊಂಡೇ ಹೋಗುವ ಮೂಲಕ ಇಂಧನ ಬೆಲೆಯೇರಿಕೆಯನ್ನು ಪ್ರತಿಭಟಿಸಿದರು. ನಗರದ ಬೋರ್ಡ್ ಹೈಸ್ಕೂಲ್‌ನಿಂದ ತ್ರಿವೇಣಿ ಸರ್ಕಲ್‌ವರೆಗೆ ರಿಕ್ಷಾವನ್ನು ತಳ್ಳಿಕೊಂಡು ಹೋಗುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. (ಎನ್.ಬಿ)

Leave a Reply

comments

Related Articles

error: