ಮೈಸೂರು

ಜೀವನವನ್ನು ರೂಪಿಸಿದ ಗುರುಗಳನ್ನು ನಾವು ಎಂದಿಗೂ ಮರೆಯಬಾರದು : ಭವಾನಿ ಶಂಕರ್

ಮೈಸೂರು,ಸೆ.10:- ಮೈಸೂರಿನ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಸಂಭ್ರಮ ಸಡಗರದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥರಾದ ಭವಾನಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸರ್ವಪಲ್ಲಿ ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದ ನಂತರ ಶಾಲಾಮಕ್ಕಳಿಂದ ಪ್ರಾರ್ಥನೆ ನಡೆಯಿತು. ಬಳಿಕ ಭವಾನಿ ಶಂಕರ್  ಮಾತನಾಡಿ,ನಮಗೆ ವಿದ್ಯೆಯನ್ನು ಕಲಿಸಿ,ಜೀವನವನ್ನು ರೂಪಿಸಿದ ಗುರುಗಳನ್ನು ನಾವು  ಎಂದಿಗೂ  ಮರೆಯಬಾರದು. ಅವರ ತ್ಯಾಗ ಅಮರವಾದದ್ದು.  ಗುರುಗಳನ್ನು ಗೌರವಿಸುವುದನ್ನು ಕಲಿತಾಗ ಮಾತ್ರ ಅದುವೇ ನಿಜವಾದ ಸಂಸ್ಕಾರ. ಎಲ್ಲರೂ ಕರ್ತವ್ಯ ಮತ್ತು ಗೌರವವನ್ನು ಎಂದಿಗೂ ಮರೆಯಬಾರದೆಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ  ಗುರುಗಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು,  ಸಂಗೀತಮಯ ಕಾರ್ಯಕ್ರಮಗಳು ಜರುಗಿದವು.  ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ-ಶಿಕ್ಷಕಿಯರಾದ ವಿದ್ಯಾಶಂಕರ್ ಚಂದ್ರು ಶಿವಲಿಂಗಪ್ಪ, ನಾಗಕನ್ನಿಕಾ, ಶೀಲಾ ಅಲುಕಾಸ್, ಗೀತಾ, ಅನಿತಾ, ಗಾಯತ್ರಿ, ಹರ್ಷ, ಪ್ರಕಾಶ್ ಎಸ್ ಬಿ,  ಪುರುಷೋತ್ತಮ್ ,ಮತ್ತು ನಾಗೇಂದ್ರ ಅವರನ್ನು  ಸಂಸ್ಥೆಯ ವತಿಯಿಂದ   ಸನ್ಮಾನಿಸಲಾಯಿತು.  ಸಂಸ್ಥೆಯ ಶಿಕ್ಷಕರಿಗಾಗಿ ಹಲವು ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಕೇದಾರನಾಥ್, ರಾಮಕೃಷ್ಣ,  ಪಬ್ಲಿಕ್ ಶಾಲೆಯ ಹಿರಿಯ ಪ್ರಾಚಾರ್ಯರಾದ ಗೋಪಾಲಸ್ವಾಮಿ, ಕಾಲೇಜು ವಿಭಾಗದ ಪ್ರಾಚಾರ್ಯ ಮಹದೇವಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿ. ಗಿರೀಶ್  ಮತ್ತು ಪ್ರಾಥಮಿಕ ಶಾಲಾವಿಭಾಗದ ಮುಖ್ಯೋಪಾಧ್ಯಾಯಿನಿ ವಾಣಿಶ್ರೀ ಹಾಗೂ ನರ್ಸರಿ ವಿಭಾಗದ ಪ್ರಾಚಾರ್ಯೆ ಉಷಾಸಿಂಗ್‍ರವರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: