ಕರ್ನಾಟಕಪ್ರಮುಖ ಸುದ್ದಿಮೈಸೂರು

ಸರ್ಕಾರಿ ಪ್ರಾಯೋಜಿತ ‘ಒತ್ತಾಯ ಪೂರಿತ’ ಬಂದ್ : ಸಂಸದ ಪ್ರತಾಪ್ ಸಿಂಹ ಆರೋಪ

ಕೇಂದ್ರಕ್ಕೆ ಸಲಹೆ ಸೂಚನೆಗಳನ್ನು ನೀಡಲು ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ

ಮೈಸೂರು,ಸೆ.10 : ಇಂದು ನಡೆಯುತ್ತಿರುವ ‘ಭಾರತ್ ಬಂದ್’ ಸರ್ಕಾರಿ ಪ್ರಾಯೋಜಿತವಾಗಿದ್ದು . ಕಾಂಗ್ರೆಸ್ ಜೆಡಿಎಸ್ ರಾಜ್ಯ ಸಮ್ಮಿಶ್ರ ಸರ್ಕಾರ ಸರಕಾರಿ ಯಂತ್ರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಬಂದ್ ನಡೆಸಬೇಕಿತ್ತು ಆದರೆ ಆದರ ಹೊರತಾಗಿ, ಸರ್ಕಾರವೇ ಪ್ರತಿಭಟನೆ ನೆಪದಲ್ಲಿ ಶಾಲಾ ಕಾಲೇಜುಗಳನ್ನು. ಸಾರಿಗೆ ಸಂಚಾರ, ಸರ್ಕಾರಿ ಕಚೇರಿಗಳನ್ನು ಬಂದ್ ಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿ. ಇದೊಂದು ಒತ್ತಾಯಪೂರಿತ ಬಂದ್ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

 ಋಣ ತೀರಿಸಲು ರಾಜ್ಯ ಬಂದ್ :

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾರನ್ನು ಪುಣ್ಯಾತ್ಮ ಅಂದಿದ್ದರೋ, ಆ ಪುಣ್ಯಾತ್ಮ ರಾಹುಲ್ ಗಾಂಧಿ ಅವರ ಋಣ ತೀರಿಸುವ ಸಲುವಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದಾರೆ  ಎಂದು ಗಂಭೀರ ಆರೋಪ ಮಾಡಿ, 37 ಸೀಟು ಗೆದ್ದ ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಕಾರಣ. ಆದ್ದರಿಂದ ಕುಮಾರಸ್ವಾಮಿ ಅವರು ಕಾಂಗ್ರೆಸ್ ಋಣ ತೀರಿಸಲು ಬಂದ್‌ಗೆ ಬೆಂಬಲ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಸಲಾಗಿದೆ‌. ಕೆ‌ಎಸ್‌ಆರ್‌ಟಿಸಿ ಬಸ್‌ಗಳನ್ನು ಮಧ್ಯಾಹ್ನದವರೆಗೆ ತೆಗೆಯದಂತೆ ಸರ್ಕಾರವೇ ಸೂಚನೆ ನೀಡಿರುವುದು ಖಂಡನೀಯ  ಸಂಸದ ಪ್ರತಾಪ್ ಸಿಂಹ ಆರೋಪ.

ಚಪ್ಪಲಿ ಎಲ್ಲಿ ಖಾದರ್ ? :

ಸಚಿವ ಯು.ಟಿ.ಖಾದರ್ ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ? ಪ್ರಶ್ನಿಸಿ  ನಾವು ಹಿಂದೆ ಮಂಗಳೂರು ಚಲೋ ಮಾಡಿದ್ದಾಗ. ಬಂದ್ ಮಾಡುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಅಂತ ಹೇಳಿದ್ದರು.  ಈಗ ಯು.ಟಿ.ಖಾದರ್ ಅವರು ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ.  ಆ ಚಪ್ಪಲಿಯಲ್ಲಿ ನಾವು ಯಾರಿಗೆ ಹೊಡೆಯಬೇಕು ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ದೇವೇಗೌಡರೇ ಸಲಹೆ ಸೂಚನೆ ನೀಡಿ

ನಿರಂತರವಾಗಿ ಏರುತ್ತಿರುವ ಕಚ್ಚ ತೈಲಬೆಲೆ, ಡಾಲರ್ ಎದುರು ರೂಪಾಯಿ ಕುಸಿತ ತಡೆಯುವುದು ಹೇಗೆ ಎಂಬುದನ್ನು ಆಡಳಿತದಲ್ಲಿ ಅನುಭವಿಗಳಾದ ಮಾಜಿ ಪ್ರಧಾನಿ ದೇವೇಗೌಡರವರು ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕಿದೆ ಎಂದು ದೇವೇಗೌಡ ಅವರಿಗೆ ಟಾಂಗ್ ನೀಡಿದರು.

ನೀವು ದೇಶದ ಆಡಳಿತ ನಡೆಸಿದ್ದೀರ.  ಬಂದ್ ಗೆ ಬೆಂಬಲ ಕೊಡುವ ಮುನ್ನ ಸ್ವಲ್ಪ ಯೋಚಿಸಿ. ಹೇಗೆ ಪೆಟ್ರೋಲ್ ಬೆಲೆ ಕಡಿಮೆ ಮಾಡೋದು ಅನ್ನೋದನ್ನು  ನಿಮ್ಮ ಮಗನಿಗೆ ಹೇಳಿಕೊಡಿ. ಆ ಮೇಲೆ ಬಂದ್‌ಗೆ ಬೆಂಬಲ ನೀಡಿ ಎಂದರು.

ಪ್ರಧಾನಿ ಮೋದಿ ಗಿಮಿಕ್ ಮಾಡುತ್ತಿಲ್ಲಾ :
ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವಾಗುವುದನ್ನು ತಡೆಗಟ್ಟಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಪ್ರತಾಪ್ ಸಿಂಹ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿತ್ತು, ಅಲ್ಲದೇ 2 ಲಕ್ಷ ಕೋಟಿ ರೂಗಳ ತೈಲಬಾಂಡ್ ಗಳನ್ನು 12 ವರ್ಷಗಳ ಕಾಲಾವಧಿಗೆ ಅಡವಿಟ್ಟಿದ್ದು ಯಪಿಎ ಸರ್ಕಾರ, ಅದರ ಮೇಲಿನ 70 ಸಾವಿರ ಕೋಟಿ ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಿದೆ. ಹೀಗಿದ್ದರೂ ತಮ್ಮ ವೈಫಲ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಮೇಲೆ ಹೊರಿಸುತ್ತಿರುವುದು ಯಾವ ನೀತಿ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಯವರ ರೈತ ಸಾಲ ಮನ್ನಾದಿಂದ ಯಾವ ರೈತರಿಗೆ ಉಪಯೋಗವಾಗಿದೆ? ಯಾರಿಗೆ 2 ಲಕ್ಷ ಸಾಲ ಮನ್ನವಾಗಿದೆ ? ಈ ಬಗ್ಗೆ ರೈತರೇ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದರು.

ಮುಂದಿನ 50 ವರ್ಷಗಳ ಕಾಲ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರು ಪ್ರತಿಭಟನೆ ಹೋರಾಟ ನಡೆಸುತ್ತಲೇ ಇರಬೇಕು. ಏಕೆಂದರೇ ಮುಂದಿನ 50 ವರ್ಷಗಳ ಕಾಲವೂ ಬಿಜೆಪಿಯೇ ಅಧಿಕಾರದಲ್ಲಿರುವುದು ಎಂದರು.

ಗೋಷ್ಠಿಯಲ್ಲಿ ಶಾಸಕ ನಾಗೇಂದ್ರ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಹೆಚ್.ವಿ.ರಾಜೀವ್, ಮಾಧ್ಯಮ ಸಂಚಾಲಕ ಪ್ರಭಾರಕ ಶಿಂಧೆ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: