
ಮೈಸೂರು
ಯೋಗ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕು: ಡಾ.ಕೆ.ರಾಘವೇಂದ್ರ ಪೈ
ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯ ಹಾಗೂ ವಿವೇಕಾನಂದ ಅಧ್ಯಯನ ಪೀಠ, ಸ್ನಾತಕೋತ್ತರ ತತ್ವಶಾಸ್ತ್ರ ವಿಭಾಗ ಇವರ ಸಹಯೋಗದೊಂದಿಗೆ ಶನಿವಾರ ತ್ರೈ-ಯೋಗ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಆರ್.ರಾಜಣ್ಣ ಉದ್ಘಾಟಿಸಿದರು. ವಿವೇಕಾನಂದಪೀಠದ ತತ್ವಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ರಾಘವೇಂದ್ರ ಪೈ ಮಾತನಾಡಿ, ಹಲವಾರು ವಿದೇಶಿಯರು ವಿವೇಕಾನಂದ ಪೀಠದಲ್ಲಿ ಬಂದು ಯೋಗವನ್ನು ಶ್ರದ್ಧಾ ಭಕ್ತಿಯಿಂದ ಕಲಿತಿದ್ದಾರೆ. ಅವರಲ್ಲಿ ಕಲಿಯಬೇಕೆನ್ನುವ ಆಸಕ್ತಿ, ಶ್ರದ್ಧೆ ಹೆಚ್ಚಾಗಿದೆ. ಅವರಲ್ಲಿರುವ ಶ್ರದ್ಧೆ-ಭಕ್ತಿಯನ್ನು ನಾವು ಕಲಿಯಬೇಕಿದೆ ಎಂದರು.
ಯೋಗ ಪರಂಪರೆಯನ್ನು ನಾವು ಉಳಿಸಿ ಬೆಳೆಸಿಕೊಂಡು ಬರಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯು.ಎಸ್.ಎ ತ್ರೈಯೋಗ ಫೌಂಡೇಶನ್ ಸಂಸ್ಥಾಪಕಿ ಯೋಗಿನಿ ಕಾಳಿ ಜಿ. ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿಜಯ ಫೌಂಡೇಶನ್ ಅಧ್ಯಕ್ಷ ಡಾ.ಬಿ.ಆರ್.ಪೈ, ಗ್ರಂಥಪಾಲಕ ಡಾ.ಆರ್.ಟಿ.ಡಿ ರಮೇಶ್ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.