ಮನರಂಜನೆ

ಬ್ರೇಕ್ ಅಪ್ ಮಾಡಿಕೊಂಡ ಕಿರಿಕ್ ಜೋಡಿ.!?

ಬೆಂಗಳೂರು,ಸೆ.10-`ಕಿರಿಕ್ ಪಾರ್ಟಿ’ ಸಿನಿಮಾ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದ ತಾರಾ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ವರದಿಯ ಪ್ರಕಾರ, ಇಬ್ಬರಿಗೂ ಹೊಂದಾಣಿಕೆಯಾಗದ ಕಾರಣದಿಂದಾಗಿ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಇಬ್ಬರ ನಡುವೆ ಹಲವು ವಿಷಯಗಳಲ್ಲಿನ ಹೊಂದಾಣಿಕೆ ಸಮಸ್ಯೆ ಬಗೆಹರಿಸಿ ಸಂಬಂಧ ಮುಂದುವರಿಸಲು ಉಭಯ ಕುಟುಂಬಗಳ ಸದಸ್ಯರು ಸಾಕಷ್ಟು ಪ್ರಯತ್ನಿಸಿದ್ದರು ಎಂದು ವಿವರಿಸಿದೆ.

ಈ ನಿಟ್ಟಿನಲ್ಲಿ ತನ್ನ ಪೋಷಕರು, ಕುಟುಂಬದ ಹಿರಿಯರು ಹಾಗೂ ಗೆಳೆಯರ ಜೊತೆ ಚರ್ಚಿಸಿ ರಶ್ಮಿಕಾ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಇದು ಕಠಿಣ ನಿರ್ಧಾರವಾದರೂ ರಕ್ಷಿತ್ ಹಾಗೂ ರಶ್ಮಿಕಾ ವೃತ್ತಿ ಜೀವನ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೇ ಇಬ್ಬರೂ ಸ್ನೇಹಿತರಾಗಿ ಉಳಿಯುತ್ತಾರೆ ಎಂಬುದು ಆಪ್ತ ಮೂಲಗಳ ಮಾತಾಗಿದೆ.

ಕಿರಿಕ್ ಪಾರ್ಟಿ ಸಿನಿಮಾ ನಂತರ ರಶ್ಮಿಕ್ ಸ್ಟಾರ್ ನಟಿಯಾದರು. ತೆಲುಗಿನ ಛಲೋ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಪರಶುರಾಮ್ ನಿರ್ದೇಶನದ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾಗೆ ಕನ್ನಡ ಮತ್ತು ತೆಲುಗು ಚಿತ್ರರಂಗದಿಂದ ಒಂದರ ಮೇಲೊಂದರಂತೆ ಅವಕಾಶಗಳು ಬರತೊಡಗಿದೆ.

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಲಿಪ್ ಲಾಕ್ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ರಕ್ಷಿತ್, ರಶ್ಮಿಕಾ ಸಂಬಂಧ ಮುರಿದುಬಿದ್ದಿದೆ ಎಂದು ವರದಿಯಾಯಿತು. ಇಬ್ಬರೂ ಈ ಸುದ್ದಿಯನ್ನು ತಳ್ಳಿ ಹಾಕಿದರು. ಆದರೆ ಇದೀಗ ಇಬ್ಬರೂ ದೂರಗುತ್ತಿರುವುದು ನಿಜ ಎಂಬುದು ಆಪ್ತ ವಲಯದಿಂದ ಕೇಳಿಬಂದಿದೆ. ಇತ್ತೀಚೆಗೆ ರಕ್ಷಿತ್ ಸಾಮಾಜಿಕ ಜಾಲತಾಣಕ್ಕೆ ಗುಡ್ ಬಾಯ್ ಹೇಳಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಅನುಮಾನ ಮೂಡಿಸಿತ್ತು. ಈಗ ನಿಶ್ಚಿತಾರ್ಥ ಮುರಿದು ಬಿದ್ದಿರುವ ವರದಿ ಬಗ್ಗೆ ರಕ್ಷಿತ್, ರಶ್ಮಿಕಾ ಪ್ರತಿಕ್ರಿಯೆ ನೀಡಿಲ್ಲ. (ಎಂ.ಎನ್)

Leave a Reply

comments

Related Articles

error: