ಸುದ್ದಿ ಸಂಕ್ಷಿಪ್ತ

ಕಮ್ಯೂನಿಟಿ ಕಾಲೇಜಿನ ಅಡ್ವಾನ್ಸ್ ಡಿಪ್ಲೊಮ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಮೈಸೂರು,ಸೆ.10:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮೀಪುರಂ, ಮೈಸೂರು, ಇಲ್ಲಿ ಎಂದಿನಂತೆ ಈ ವರ್ಷವೂ 2018-19 UGC ಇಂದ ಅನುಮತಿ ಪಡೆದು ನಮ್ಮ ಕಮ್ಯೂನಿಟಿ ಕಾಲೇಜಿನ ಕೌಶಲ್ಯ ಅಭಿವೃಧಿ ಸ್ಕೀಮಿನಡಿಯಲ್ಲಿ (NSQF) 2018-19ರ ಶೈಕ್ಷಣಿಕ ವರ್ಷದಲ್ಲಿ ವಸ್ತು ಸಂಗ್ರಹಾಲಯಶಾಸ್ತ್ರ, ಹಾಸ್ಪಟಾಲಿಟಿ ಮತ್ತು ಕೆಟರಿಂಗ್ ವಿಷಯಗಳಿಗೆ ಪ್ರಯೋಗಾಲಯ ಹಾಗೂ ತರಗತಿಗಳ ಪದ್ಧತಿಯಲ್ಲಿ ಬೋಧನೆಯೋಡನೆ ಒಂದು ವರ್ಷದ ಸರ್ಟಿಫಿಕೇಟ್ ಮತ್ತು ಎರಡು ವರ್ಷದ ಅಡ್ವಾನ್ಸ್ ಡಿಪ್ಲೊಮ ಕೋರ್ಸ್‍ಗಳನ್ನು ನಡೆಸಲಾಗುತ್ತಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಕಾಲೇಜಿನ ಕಛೇರಿ ವೇಳೆಯಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಈಗಾಗಲೇ ಸಂಬಂಧಿಸಿದ ಇಲಾಖೆಗಳಲ್ಲಿ ಕಾರ್ಯನಿರ್ವಸುತ್ತಿರುವವರು ಸೂಕ್ತ ದಾಖಲೆಗಳೊಂದಿಗೆ ಡೆಪ್ಯೂಟೇಷನ್ ಮೇಲೆ ಹೆಚ್ಚಿನ ಜ್ಞಾನಾರ್ಜನೆಗಾಗಿ ಬರುವವರಿಗೆ ಕೆಲವು ಸೀಟ್‍ಗಳನ್ನು ಕಾಯ್ದಿರಿಸಲಾಗಿದೆ.

ಅರ್ಜಿಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ PUC ಯಲ್ಲಿ ಖಡ್ಡಾಯವಾಗಿ ತೇರ್ಗಡೆ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಮೊ.ಸಂ 8050332978/9845404648 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: