ವಿದೇಶ

ಮಾಜಿ ಭುವನ ಸುಂದರಿ ಚೆಲ್ಸಿ ಸ್ಮಿತ್ ನಿಧನ

ನ್ಯೂಯಾರ್ಕ್,ಸೆ.10-ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಭುವನ ಸುಂದರಿ ಚೆಲ್ಸಿ ಸ್ಮಿತ್ (45) ನಿಧನರಾಗಿದ್ದಾರೆ.

1995ರಲ್ಲಿ ಅಮೆರಿಕಾವನ್ನು ಪ್ರತಿನಿಧಿಸಿದ್ದ ಚೆಲ್ಸಿ ಭುವನ ಸುಂದರಿ ಕಿರೀಟ ಧರಿಸಿದ್ದರು. 1994 ಭುವನ ಸುಂದರಿ ಭಾರತದ ಸುಷ್ಮಿತಾ ಸೇನ್ ಅವರು ಚೆಲ್ಸಿಗೆ ಭುವನಸುಂದರಿ ಕಿರೀಟ ತೊಡಿಸಿದ್ದರು. ಚೆಲ್ಸಿ ಸ್ಮಿತ್ ಟಿವಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. (ಎಂ.ಎನ್)

Leave a Reply

comments

Related Articles

error: