ಕ್ರೀಡೆದೇಶ

ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕ್ರಿಕೆಟಿಗ ಸಂಜು ಸ್ಯಾಮ್ಸನ್

ನವದೆಹಲಿ,ಸೆ.10-ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ ಬಹುಕಾಲದ ಗೆಳತಿ ಹಾಗೂ ಪ್ರೇಯಸಿಯೊಂದಿಗೆ ಚಾರು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಸಂಜು ಈ ವಿಚಾರವನ್ನು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜು ಮತ್ತು ಚಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ನಮ್ಮ ಪ್ರೀತಿಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಕ್ಕೆ ನಮ್ಮ ತಂದೆತಾಯಿಗೆ ಧನ್ಯವಾದ. ಚಾರು ಅವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. 2013 ಆಗಸ್ಟ್ 22 ರಂದು ರಾತ್ರಿ 11.11ಕ್ಕೆ ಸಂಜು ಸ್ಯಾಮ್ಸನ್, ಚಾರುಗೆ ಹಾಯ್ ಎಂದು ಸಂದೇಶ ಕಳಿಸಿದ್ದರು, ಅದಾಗಿ ಸರಿಸುಮಾರು 5 ವರ್ಷಗಳ ಬಳಿಕ ಇದೀಗ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಚಾರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಸಂಜು ಸ್ಯಾಮ್ಸನ್ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಸಂಜು 2015ರಲ್ಲಿ ಜಿಂಬಾಬ್ವೆ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಚಾರು ಅವರ ತಂದೆ ಬಿ. ರಮೇಶ್ ಕುಮಾರ್ ಹಿರಿಯ ಪತ್ರಕರ್ತರಾಗಿದ್ದು, ಡಿ.22ರಂದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: