ಮೈಸೂರು

ಸೆ.16ರಂದು ಶತಕೋಟಿ ಶ್ರೀಶಂಕರ ಜಪಯಜ್ಞಕ್ಕೆ ಚಾಲನೆ

ಮೈಸೂರು, ಸೆ. 10 : ನಗರದ ಶ್ರೀ ಶಂಕರನಾಮ ಜಪಯಜ್ಞ ಸೇವಾ ಸಮಿತಿ ಆಯೋಜಿಸಿರುವ ಒಂದು ವರ್ಷದ ಕಾರ್ಯಕ್ರಮವಾದ ಶತಕೋಟಿ ಶ್ರೀ ಶಂಕರ ನಾಮ ಜಪಯಜ್ಞದ ಉದ್ಘಾಟನಾ ಸಮಾರಂಭ ಸೆ. 16 ರಂದು ಬೆಳಗ್ಗೆ 10ಕ್ಕೆ ವಿಶ್ವೇಶ್ವರ ನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಸನ್ನಶಂಕರ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾಮಿ ಯುಕ್ತೇಶಾನಂದರು ಉದ್ಘಾಟಿಸಲಿದ್ದು, ಭವಾನಿ ಶಂಕರ್ ಅಧ್ಯಕ್ಷತೆ ವಹಿಸುವರು, ಬಿಂದುಮಾಧವ ಅವಧೂತರ ಸದ್ಗುರು ಸಾನ್ನಿಧ್ಯ ವಹಿಸುವರು. ಎಸ್.ಎ. ರಾಮದಾಸ್, ಎಚ್. ರಾಮಚಂದ್ರ, ಡಾ. ಭಾನುಪ್ರಕಾಶಶರ್ಮ, ಟಿ.ಎನ್. ಪ್ರಭಾಕರ್, ಡಾ.ಟಿ.ವಿ. ಸತ್ಯನಾರಾಯಣ, ನಾಗಲಕ್ಷ್ಮಿ ಚಂದ್ರಶೇಖರ್ ಅತಿಥಿಗಳಾಗಿರುವರು.

ಕಾರ್ಯಕ್ರಮದಲ್ಲಿ ಸಾವಿರ ಸಂಖ್ಯೆಯಲ್ಲಿ ಮಾತೆಯರು ಏಕಕಾಲದಲ್ಲಿ ಒಂದೇ ಕಂಠದಿಂದ ಸ್ತೋತ್ರ ಪಠಿಸಲಿದ್ದು, ವಟುಗಳು, ವಿದ್ವಾಂಸರು ಸಹಾ ಪಾಲ್ಗೊಳ್ಳುವರು.

ಪ್ರತಿನಿತ್ಯ ಪ್ರತಿಯೊಬ್ಬರೂ ಅವರವರಿದ್ದೆಡೆಯೇ ಮಾಡುವ ಜಪಯಜ್ಞ ಇದಾಗಿದ್ದು, ಕಾರ್ಯಕ್ರಮ ವೇಳೆ ಶಂಕರರ ಜೀವನ, ಸಂದೇಶ, ಕೊಡುಗೆ, ಜಪದಿಂದ ಲೋಕಕಲ್ಯಾಣ ಹೇಗೆ ಸಾಧ್ಯ ಎಂಬುದನ್ನು ತಿಳಿಸಲಾಗುವುದು.

ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣುವ ಮುಖ್ಯ ಐದು ದೇವತೆಗಳಾದ ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ, ಮಹೇಶ್ವರರೆಂಬ ಪೂಜೆಯನ್ನು ಸಮಾನವಾಗಿ ಮಾಡಬೇಕೆಂಬ ಅರಿವು ಮೂಡಿಸಿದವರು ಆದಿಶಂಕರರಾಗಿದ್ದು, ಅವರು ಲೋಕಕಲ್ಯಾಣದ ಚಿಂತನೆ ನೀಡಿದವರಾಗಿದ್ದಾರೆ ಎಂದು ವಿವರಿಸಿದರು.

ಭವಾನಿಶಂಕರ್, ಡಾ.ಟಿ.ವಿ. ಸತ್ಯನಾರಾಯಣ, ಟಿ.ಎನ್. ಪ್ರಭಾಕರ್, ಶ್ರೀನಿವಾಸಮೂರ್ತಿ ಇದ್ದರು. (ವರದಿ : ಕೆ.ಎಂ.ಆರ್)

 

 

Leave a Reply

comments

Related Articles

error: