ಸುದ್ದಿ ಸಂಕ್ಷಿಪ್ತ

ನಾಗರಿಕ ಸೇವೆ ; ಬ್ಯಾಂಕಿಂಗ್ ಪರೀಕ್ಷೆಗಳು – ನಾಳೆ ಕಾರ್ಯಾಗಾರ

ಮೈಸೂರು,ಸೆ.10 : ಎಸ್ ಬಿಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ಎಂಟ್ರಿ ಟು ಸರ್ವಿಸ್ ಮತ್ತು ಐಕ್ಯೂಎಸಿ ಘಟಕಗಳ ಸಂಯುಕ್ತವಾಗಿ ‘ನಾಗರಿಕ ಸೇವೆ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳು; ವಿಷಯವಾಗಿ ಕಾರ್ಯಾಗಾರವನ್ನು ಸೆ.11ರ ಬೆಳಗ್ಗೆ 10 ಗಂಟೆಗೆ ಕಾಲೇಜಿನ ಕಾಮರ್ಸ್ ಲ್ಯಾಬ್ ನಲ್ಲಿ ಏರ್ಪಡಿಸಲಾಗಿದೆ.

ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಹೆಚ್.ವೈ. ಶ್ರೀಷಕುಮಾರ್ ಉದ್ಘಾಟಿಸುವರು. ಮಹಾಜನ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀಧರ್ ಅಧ್ಯಕ್ಷತೆ. ಪ್ರಾಂಶುಪಾಲ ಡಾ.ಎಸ್.ವೆಂಕಟರಾಮು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್.ರಮೇಶ್ ಹಾಜರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: