ದೇಶಪ್ರಮುಖ ಸುದ್ದಿ

ದೇಶದಲ್ಲಿ ಜನ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ: ಶಾಸಕ ಹೆಚ್.ವಿಶ್ವನಾಥ್ ವ್ಯಾಖ್ಯಾನ

ಮೈಸೂರು (ಆ.10): ಪೆಟ್ರೋಲ್ ಡೀಸೆಲ್ ಅನಿಯಮಿತ ಬೆಲೆ ಏರಿಕೆಯಿಂದಾಗಿ ದೇಶದ ಜನರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಹೇಳಿದ್ದಾರೆ.

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವೈಶಂಪಾಯನ ಸರೋವರದಲ್ಲಿ ದುರ್ಯೋದನ ಅಡಗಿ ಕುಳಿತಂತೆ ಕುಳಿತಿದ್ದಾರೆ. ಏಕೆ ಮಾತನಾಡುತ್ತಿಲ್ಲ? ಹೊರಗೆ ಬಂದು ಮಾತನಾಡಿ ತೈಲ ದರ ಏರಿಕೆ ಬಗ್ಗೆ ಜನರಿಗೆ ಸಮಜಾಯಿಷಿ ನೀಡಿ ಎಂದರು.

ಕೇಂದ್ರದ್ದು ಕೇವಲ ಮಾತಿನ ಸರ್ಕಾರ, ಈ ಬಂದ್ ವೇಸ್ಟ್ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಆದರೆ, ನಿಜವಾಗಿಯೂ ದೇಶಕ್ಕೆ ನೀವೇ ವೇಸ್ಟ್, ಮೋದಿಯವರೇ ನಿಮ್ಮಿಂದ ಉಪಯೋಗವಿಲ್ಲ. ನಿಮ್ಮನ್ನು ಬೇಗ ಹೊರಹಾಕಬೇಕು. ಅದಕ್ಕಾಗಿ ದೇಶಾದ್ಯಂತ ಇಂದು ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: