ಮೈಸೂರು

ಜೆಎಸ್ಎಸ್ ವತಿಯಿಂದ ಕೇರಳದ ಸಂತ್ರಸ್ಥರಿಗೆ ಪರಿಹಾರ ನಿಧಿ

ಮೈಸೂರು,ಸೆ.10 :  ಸುತ್ತೂರು ಮಠದ ವತಿಯಿಂದ ಕೇರಳ ಸಂತ್ರಸ್ಥರಿಗೆ 10 ಲಕ್ಷ ರೂಗಳ ದೇಣಿಗೆಯನ್ನು ನೀಡಲಾಯಿತು.

ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿ ಮಹೋತ್ಸವದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಘೋಷಿಸಿದ್ದಂತೆ ಸುತ್ತೂರು ಮಠದ ಜೆಎಸ್ಎಸ್ ವಿದ್ಯಾಪೀಠದ ಹಾಗೂ ಸಂಸ್ಥೆಗಳ ನೌಕರರ ಕೊಡುಗೆ ಸೇರಿದಂತೆ ಒಟ್ಟು 10 ರೂ.ಗಳ ಚೆಕ್ಕನ್ನು ಕೇರಳದ ನೆರೆ ಸಂತ್ರಸ್ಥರ ಪುನರ್ ವಸತಿಗೆ ಕೇರಳದ ಹಂಗಾಮಿ ಮುಖ್ಯಮಂತ್ರಿ ಇ.ಪಿ.ಜಯರಾಮನ್ ಅವರಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ.ಕೆ.ಎಸ್.ಸುರೇಶ್ ಅವರು ದೇಣಿಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸುತ್ತೂರು ಜೆಸ್ಎಸ್ ಉಚಿತ ಶಿಕ್ಷಣ ಶಾಲೆಯ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ ಇದ್ದರು ಎಂದು ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: