ಮೈಸೂರು

ಬೆಳೆಗಳ ಕ್ಷೇತ್ರೋತ್ಸವ ಕಾರ್ಯಕ್ರಮ

ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ, ಮೈಸೂರು ಜಿಲ್ಲೆಯಲ್ಲಿನ ರೈತಾಪಿ ವರ್ಗದವರಿಗೆ ಸಾವಯವ ಭತ್ತದ ಬೆಳೆಗಳ ಕ್ಷೇತ್ರೋತ್ಸವ ಮತ್ತು ಹವಾಮಾನ ಬದಲಾವಣೆಯೊಂದಿಗಿನ ಅನುಭವ  ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಮದ  ಉದ್ಘಾಟನೆಯನ್ನು ಬೆಂಗಳೂರಿನ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಎನ್.ಆರ್. ಗಂಗಾಧರಪ್ಪ ನೆರವೇರಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಲಯ ಕೃಷಿ ಸಂಶೋಧನಾ ಕೇಂದ್ರದ, ಸಹ ಸಂಶೋಧನಾ ನಿರ್ದೇಶಕ ಡಾ.ಸಿ.ಆರ್.ರವಿಶಂಕರ್‍ ಮಾತನಾಡಿ, ಹಿಂದಿನ ಹಳೆ ಕೃಷಿ ಪದ್ಧತಿಯನ್ನು ಮುಂದುವರೆಸಲು ರೈತರಿಗೆ ಸಲಹೆಯನ್ನು ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ನಾಗನಹಳ್ಳಿ ಡಾ.ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕಿ ಜಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: