ಮೈಸೂರು

ಎಂ.ಬಿ.ಎ: ಪೂಜಾ ಗೌಡಗೆ ದ್ವಿತೀಯ ರ್ಯಾಂಕ್

ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಎಂ.ಬಿ.ಎ ಪದವಿ ಪರೀಕ್ಷೆಯಲ್ಲಿ ಪೂಜಾ ಗೌಡ ಪಿ. ಅವರು ವಿವಿ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದಿದ್ದಾರೆ.

ಪೂಜಾಗೌಡ ಅವರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡಿದ್ದು ಈಚೆಗೆ ಜರುಗಿದ ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ರಾಜವಂಶಸ್ಥೆ ಡಾ.ಪ್ರಮೋದ ದೇವಿ ಒಡೆಯರ್ ಹಾಗೂ ಪ್ರೊ.ಕೆ.ಎಸ್.ತಿಮ್ಮಯ್ಯ ಅವರು ಪೂಜಾಗೌಡ ಅವರಿಗೆ ‘ಸುನಂದ’ ಚಿನ್ನದ ಪದಕ ಹಾಗೂ ಆಲ್ ಇಂಡಿಯಾ ಕಾಮರ್ಸ್ ಕಾನ್ಫರೆನ್ಸ್ ಸ್ಮರಣಾರ್ಥ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು.

ಪೂಜಾಗೌಡ ಪಿ. ಕುವೆಂಪುನಗರದ ಆರ್. ಪರಶಿವಮೂರ್ತಿ ಹಾಗೂ ಕಲಾವತಿ ದಂಪತಿ ಪುತ್ರಿಯಾಗಿದ್ದಾರೆ. ಈಕೆಯ ಸಾಧನೆಗೆ ಪೋಷಕರು ಹಾಗೂ ಕಾಲೇಜು ಮಂಡಳಿಯವರು ಶುಭ ಹಾರೈಸಿದ್ದಾರೆ.

Leave a Reply

comments

Related Articles

error: