ಪ್ರಮುಖ ಸುದ್ದಿ

ಸಂಪ್ರದಾಯದಂತೆ ದಸರಾ ಜನೋತ್ಸವ ಆಚರಣೆ : ಮಡಿಕೇರಿ ದಸರಾ ಸಮಿತಿ ನಿರ್ಧಾರ

ರಾಜ್ಯ(ಮಡಿಕೇರಿ) ಸೆ.10 :- ಮುಂದಿನ ತಿಂಗಳು ಮಡಿಕೇರಿ ದಸರಾ ಜನೋತ್ಸವವನ್ನು ಸಂಪ್ರದಾಯದಂತೆ ಅರ್ಥಪೂರ್ಣವಾಗಿ ಆಚರಿಸಲು ಮಡಿಕೇರಿ ದಸರಾ ಸಮಿತಿ ಸಭೆ ನಿರ್ಧರಿಸಿದೆ. ಹೆಚ್ಚಿನ ಅನುದಾನ ಕೋರುವ ನಿಟ್ಟಿನಲ್ಲಿ ಶೀಘ್ರವೇ ಸರಕಾರದ ಬಳಿ ಜನಪ್ರತಿನಿಧಿಗಳೊಂದಿಗೆ ನಿಯೋಗ ತೆರಳಲಾಗುವುದೆಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಿತಿ ಪ್ರಮುಖರು ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆ ಸಂಕಷ್ಟದಲ್ಲಿರುವುದರಿಂದ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಬೇಕೆಂದು ಸಲಹೆ ನೀಡಿದರು. ಮನರಂಜನೆ, ಕ್ರೀಡಾಕೂಟ, ಕವಿಗೋಷ್ಟಿಯಂಥ ಕಾರ್ಯಕ್ರಮಗಳಿಗೆ ಅವಕಾಶ ನೀಡದೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕೊನೇ ಎರಡು ದಿನಗಳು ಗಾಂಧಿ ಮೈದಾನದಲ್ಲಿ ಶಾಮಿಯಾನ ಹಾಕಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಈಗಾಗಲೇ ದಶಮಂಟಪಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದಸರಾ ಮಂಟಪ ಹೊರಡಿಸಲು ನಿರ್ಧರಿಸಿಯಾಗಿದೆ. ಹೀಗಿರುವಾಗ ದಸರಾವನ್ನೂ 9 ದಿನಗಳು ಸರಳವಾಗಿ ಆಚರಿಸುವುದು ಅನಿವಾರ್ಯವಾಗಬಹುದು. ಸರಕಾರ ನೀಡುವ ಅನುದಾನವನ್ನು ಅವಲಂಭಿಸಿ ದಸರಾ ಆಚರಿಸೋಣ, ವೆಚ್ಚ ಕಡಿಮೆ ಮಾಡೋಣ ಎಂದು ಹಿರಿಯ ಸದಸ್ಯರು ಸಲಹೆ ನೀಡಿದರು.

ದಸರಾ ಸಮಿತಿಯ  ಪ್ರಧಾನ ಕಾರ್ಯದರ್ಶಿ ಎ.ಸಿ.ದೇವಯ್ಯ, ಪ್ರಮುಖರಾದ  ಎಂ.ಬಿ.ದೇವಯ್ಯ,  ಜಿ.ಚಿದ್ವಿಲಾಸ್. ಕೆ.ಎಸ್.ರಮೇಶ್, ಅಬ್ದುಲ್ ರಜಾಕ್, ಬೈ,ಶ್ರೀ.ಪ್ರಕಾಶ್, ಸತೀಶ್ ಪೈ,   ಬಿ.ಎಂ.ರಾಜೇಶ್, ಬಿ.ಕೆ.ಅರುಣ್ ಕುಮಾರ್,  ಬಿ.ಆರ್.ರವಿ, ಚಿ.ನಾ.ಸೋಮೇಶ್, ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ಕವಿಗೋಷ್ಟಿ ಸಮಿತಿ ಅದ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಪತ್ರಕರ್ತ ರಮೇಶ್ ಕುಟ್ಟಪ್ಪ ಸೇರಿದಂತೆ ಅನೇಕರು ಅಭಿಪ್ರಾಯ ಹಂಚಿಕೊಂಡರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಶೀಘ್ರದಲ್ಲಿಯೇ ಸರಕಾರದ ಬಳಿ ಜನಪ್ರತಿನಿಧಿಗಳೊಂದಿಗೆ ದಸರಾ ಜನೋತ್ಸವಕ್ಕೆ ಅನುದಾನ ಕೋರಿ ನಿಯೋಗ ತೆರಳಲಾಗುತ್ತದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದಸರಾ ಆಚರಿಸಲಾಗುತ್ತದೆ. ಸರಕಾರ ಎಷ್ಟು ಅನುದಾನ ನೀಡುತ್ತದೆ ಎಂಬುದನ್ನು ಅವಲಂಭಿಸಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತದೆ ಎಂದರು.

ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಖಚಾಂಜಿ ಸಂಗೀತ ಪ್ರಸನ್ನ, ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ಅನಿತಾ ಪೂವಯ್ಯ, ಪ್ರಕಾಶ್ ಆಚಾರ್ಯ ಮತ್ತು ಸಮಿತಿ ಪ್ರಮುಖರು, ದಶಮಂಟಪ ಕರಗ ಸಮಿತಿ ಸಮಿತಿ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಮಮಂದಿರದಲ್ಲಿ ಪೂಜೆ

ಸಭೆಗೂ ಮೊದಲು ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀಪೇಟೆ ರಾಮಮಂದಿರದಲ್ಲಿ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆ ನೆರವೇರಿತು. ಈ ವರ್ಷವೂ ನಿರ್ವಿಘ್ನವಾಗಿ ದಸರಾ ನಾಡಹಬ್ಬದ ಆಚರಣೆ ನಡೆಯುವಂತಾಗಲಿ ಎಂದು ಸಮಿತಿ ಪ್ರಮುಖರು ಪ್ರಾರ್ಥಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: