ಪ್ರಮುಖ ಸುದ್ದಿ

ಹೈದ್ರಾಬಾದ್ ನಲ್ಲಿ ಅವಳಿ ಸ್ಪೋಟ ಪ್ರಕರಣ : ಇಬ್ಬರಿಗೆ ಗಲ್ಲು

ದೇಶ(ಹೈದ್ರಾಬಾದ್)ಸೆ.11:- ಹೈದ್ರಾಬಾದ್ ನಲ್ಲಿ ಅವಳಿ ಸ್ಪೋಟ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2007ರಲ್ಲಿ ಹೈದ್ರಾಬಾದ್ ನ ಲುಂಬಿನಿ ಪಾರ್ಕ್ ಮತ್ತು ಗೋಕುಲ್ ಚಾಟ್ ನಲ್ಲಿ ಬಾಂಬ್ ಸ್ಪೋಟ ನಡೆದಿತ್ತು.ಅದರಲ್ಲಿ 44ಜನರು ಸಾವನ್ನಪ್ಪಿ 68ಮಂದಿ ಗಂಭೀರ ಗಾಯಗೊಂಡಿದ್ದರು. ಅದಕ್ಕೆ ಕಾರಣರಾಗಿದ್ದ ಅನೀಖ್ ಶಫೀಕ್ ಸಯ್ಯದ್, ಅಕ್ಬರ್ ಇಸ್ಮಾಯಿಲ್ ಅವರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಇವರಿಗೆ ಸಹಕರಿಸಿದ್ದ ಪ್ರಕರಣದ ಮೂರನೇ ಆರೋಪಿಯಾಗಿದ್ದ ತಾರೀಖ್ ಅಜುಮಾಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. (ಎಸ್.ಎಚ್)

Leave a Reply

comments

Related Articles

error: