ಮೈಸೂರು

ಕಾರಿಗೆ ಹಿಂದಿನಿಂದ ಗುದ್ದಿದ ಖಾಸಗಿ ಬಸ್ : ಕಾರು ಜಖಂ

ಮೈಸೂರು,ಸೆ.11:- ಚಲಿಸುತ್ತಿದ್ದ ಕಾರೊಂದಕ್ಕೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ಡಿವೈಡರ್ ಮೇಲೇರಿ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಪಡುವಾರಹಳ್ಳಿ ಜಂಕ್ಷನ್ ಬಳಿ ನಡೆದಿದೆ.

ಸಚಿನ್ ಎಂಬವರು ತನ್ನ ಸ್ನೇಹಿತನನ್ನು ಮನೆಗೆ ಬಿಟ್ಟು ಬರಲು ಜಯಲಕ್ಷ್ಮಿಪುರಂಗೆ ಬಂದು  ವಾಪಸ್ಸಾಗುತ್ತಿದ್ದ ವೇಳೆ ಹುಣಸೂರು ಕಡೆಯಿಂದ ಬಂದ ಖಾಸಗಿ ಬಸ್ ಹಿಂದಿನಿಂದ ಬಲವಾಗಿ ಗುದ್ದಿದೆ. ಪರಿಣಾಮ ಕಾರನ್ನು ಚಲಾಯಿಸುತ್ತಿದ್ದ ಸಚಿನ್ ಕಾರಿನಿಂದ ಕೆಳಗೆ ಹಾರಿದ್ದಾರೆ. ಸಚಿನ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಚಾಲಕ ಬಸ್ ನಿಲ್ಲಿಸದೇ ಸ್ಥಳದಿಂದ ಪಾರಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ವಿವಿಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಸ್)

Leave a Reply

comments

Related Articles

error: