ಕ್ರೀಡೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಶ್ರೀಲಂಕಾ ಆಟಗಾರ ದಿನೇಶ್ ಚಾಂಡಿಮಲ್ ಅಲಭ್ಯ

ಕೊಲಂಬೊ,ಸೆ.11-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡದಿರಲು ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ನಿರ್ಧರಿಸಿದ್ದಾರೆ.

ಟೂರ್ನಿಯಲ್ಲಿ ಆಡಲಿರುವ ತಂಡದಲ್ಲಿ ಅವರು ಸ್ಥಾನಗಳಿಸಿದ್ದರು. ಆದರೆ ದೇಶೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಚಾಂಡಿಮಲ್ ಗಾಯಗೊಂಡ ಕಾರಣ ಆಡಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಸಮಿತಿ ತಿಳಿಸಿದೆ.

ಚಾಂಡಿಮಲ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಿರೋಷನ್ ಡಿಕ್ವೆಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ತಂಡದಲ್ಲಿ ಏಂಜೆಲೊ ಮ್ಯಾಥ್ಯೂಸ್ (ನಾಯಕ), ಕುಶಾಲ್ ಪೆರೇರ, ಕುಶಾಲ್ ಮೆಂಡಿಸ್, ಉಪುಲ್ ತರಂಗ, ನಿರೋಷನ್ ಡಿಕ್ವೆಲ್ಲಾ, ಧನುಷ್ಕಾ ಗುಣತಿಲಕ, ತಿಸಾರ ಪೆರೇರ, ದಾಸುನ್ ಶಾನಕ, ಧನಂಜಯ ಡಿ ಸಿಲ್ವಾ, ಅಖಿಲ ಧನಂಜಯ, ದಿಲ್ರುವಾನ್ ಪೆರೇರ, ಅಮಿಲ ಅಪೋನ್ಸೊ, ಕಾಸುಸ್ ರಜಿತ, ಸುರಂಗ ಲಕ್ಮಲ್, ದುಷ್ಮಂತ ಚಮೀರ, ಲಸಿತ್ ಮಾಲಿಂಗ ಆಡಲಿದ್ದಾರೆ.

ಏಷ್ಯಾಕಪ್ ಸೆ.15ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. (ಎಂ.ಎನ್)

Leave a Reply

comments

Related Articles

error: