ಮೈಸೂರು

ಸೆ.16ರಂದು ಯೋಗಿನಾರೇಯಣ ಬಣಜಿಗ ಸಂಘದಿಂದ ಪ್ರತಿಭಾ ಪುರಸ್ಕಾರ : ವಧುವರರ ಅನ್ವೇಷಣೆ

ಮೈಸೂರು,ಸೆ.11 : ನಗರದ ಶ್ರೀ ಯೋಗಿನಾರೇಯಣ ಬಣಜಿಗ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಧುವರರ ಅನ್ವೇಷಣಾ ಕಾರ್ಯಕ್ರಮವನ್ನು ಸೆ.16ರ ಬೆಳಗ್ಗೆ 10.30ಕ್ಕೆ, ಸರಸ್ವತಿಪುರಂನಲ್ಲಿರುವ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಹೆಚ್.ಆರ್.ಗೋಪಾಲಕೃಷ್ಣ ತಿಳಿಸಿದರು.

ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರು ಕಾರ್ಯಕ್ರಮದೊಂದಿಗೆ ಗಣಕಯಂತ್ರ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಮೈಲಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಅವರು ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಸಂಘದ ಅಧ್ಯಕ್ಷ ಎಂ.ನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ, ಕಾರ್ಯದರ್ಶಿ ಹೆಚ್.ಆರ್.ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡುವರು. ವೆಂಕಟೇಶ್ ಬಾಬು, ಎಂ.ಜಿ.ಸೋಮಶೇಖರ್, ವಿ.ಕೆ.ಜಗದೀಶ್ ಬಾಬು, ಕೆ.ಜೆ.ಸತ್ಯನಾರಾಯಣ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಅಲ್ಲದೇ ಸಂಘದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿದ್ದ ಪೆರಿಕಲ್ ಎಂ ಸುಂದರ್, ಉಪಾಧ್ಯಕ್ಷ ಎನ್.ಶ್ರೀನಿವಾಸ ಮೂರ್ತಿ, ಎಂ.ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಜಗದೀಶ್, ನಿರ್ದೇಶಕ ಎಂ.ವಿ.ನಾರಾಯಣಸ್ವಾಮಿ, ನಿವೃತ್ತ ಪಿಎಸ್ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸ್ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ಪ್ರಸಕ್ತ ಸಾಲಿನ 75ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸಹ ಕಾರ್ಯದರ್ಸಿ ಹೆಚ್.ಎಸ್.ಕೃಷ್ಣಪ್ಪ, ಕಾರ್ಯದರ್ಶಿ ಹೆಚ್.ಆರ್.ಗೋಪಾಲಕೃಷ್ನ, ಖಜಾಂಚಿ ಎಂ.ನಾಗರಾಜು, ನಿರ್ದೇಶಕ ಡಿ.ಬಿ.ಚಂದ್ರಶೇಖರಯ್ಯ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: