ಮನರಂಜನೆ

ವಿನೀಶ್‌ನನ್ನು ದರ್ಶನ್ ಸೆಟ್‌ಗೆ ಕರೆತಂದ ವಿಜಯಲಕ್ಷ್ಮಿ

ಬೆಂಗಳೂರು (ಸೆ.11): ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ‘ಯಜಮಾನ’ ಚಿತ್ರೀಕರಣದ ಸೆಟ್‌ನಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಸುದ್ದಿಗೆ ದಾರಿ ಮಾಡಿಕೊಟ್ಟಿದೆ. ಜತೆಗೆ ಸಿನಿಮಾ ಸೆಟ್‌ನಲ್ಲಿ ಇಬ್ಬರು ಇರುವ ಫೋಟೋಗಳು ಸುದ್ದಿಯಾಗಿವೆ.

ವಿಜಯಲಕ್ಷ್ಮೀ ದರ್ಶನ್ ಅವರು ‘ಯಜಮಾನ’ ಚಿತ್ರೀಕರಣದ ಸೆಟ್‌ಗೆ ಹೋಗಿದ್ದರ ಹಿಂದೆ ಬೇರೆಯದ್ದೇ ಆದ ಕತೆ ಇದೆ. ಯಜಮಾನ ಚಿತ್ರದಲ್ಲಿ ದರ್ಶನ್ ಜತೆ ಪುಟ್ಟ ಪಾತ್ರದಲ್ಲಿ ಅವರ ಪುತ್ರ ವಿನೀಶ್ ನಟನೆ ಮಾಡುತ್ತಿದ್ದಾನೆ. ತಮ್ಮ ಪುತ್ರನನ್ನು ಸೆಟ್‌ಗೆ ಕರೆದುಕೊಂಡು ಹೋಗಿ ಬರುವ ಸಲುವಾಗಿ ಪಿ.ಕುಮಾರ್ ನಿರ್ದೇಶನದ ‘ಯಜಮಾನ’ ಚಿತ್ರೀಕರಣ ಸ್ಥಳದಲ್ಲಿ ವಿಜಯಲಕ್ಷ್ಮೀ ದರ್ಶನ್ ಕಾಣಿಸಿಕೊಂಡಿದ್ದರು. ಹೀಗೆ ಸೆಟ್‌ಗೆ ಹೋದಾಗ ನಟ ದರ್ಶನ್ ಕೂಡ ಎದುರಾಗಿದ್ದಾರೆ.

ವಿನೀಶ್ ‘ಯಜಮಾನ’ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಚಿತ್ರದಲ್ಲಿ ಇವರ ಲುಕ್ ಹೇಗಿರುತ್ತದೆ ಎಂಬುದನ್ನು ನೋಡಲು ಗಣೇಶನ ಹಬ್ಬದವರೆಗೂ ಕಾಯಿರಿ ಎನ್ನುತ್ತಾರೆ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್. ವಿನೀಶ್ ಈ ಹಿಂದೆ ‘ಐರಾವತ’ ಚಿತ್ರದಲ್ಲೂ ಪೊಲೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದ. (ಎನ್.ಬಿ)

Leave a Reply

comments

Related Articles

error: