ಮೈಸೂರು

ವಿಜಯಶ್ರೀಪುರ ಬಡಾವಣೆಯ ನಿವಾಸಿಗಳ ಸಮಸ್ಯೆ ಆಲಿಸಿದ ಸಿಎಂ ಕುಮಾರಸ್ವಾಮಿ : ಸಿಎಂ ಗೆ ಮನವಿ ಸಲ್ಲಿಕೆ

ಮೈಸೂರು,ಸೆ.11:- ಮೈಸೂರಿನ ವಿಜಯಶ್ರೀಪುರ ಬಡಾವಣೆಯನ್ನು ಸಕ್ರಮಗೊಳಿಸುವಂತೆ ವಿಜಯಶ್ರೀಪುರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.

ಮೈಸೂರಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾದ ವಿಜಯಶ್ರೀಪುರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಮುಖ್ಯಮಂತ್ರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ರಾಜ್ಯದ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಯವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿಜಯಶ್ರೀಪುರದ ನಿವಾಸಿಗಳು ತಮ್ಮ ಮನೆಗಳ ಭೌತಿಕ ಸ್ವಾಧೀನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಿಕೊಟ್ಟಿರುವುದರಿಂದ ಮನೆಗಳನ್ನು ಸಕ್ರಮಗೊಳಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಒಂದು ಸ್ಕೀಂ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದು ಸರ್ಕಾರದ ಅನುಮೋದನೆಯ ಹಂತದಲ್ಲಿದೆ. ನಾವು ಹಿಂದಿನ ಮುಖ್ಯಮಂತ್ರಿಯವರ ಮೌಖಿಕ ನಿರ್ದೇಶನದ ಮೇರೆಗೆ ನಮ್ಮ ಮನೆಗಳ ಭೌತಿಕ ಸ್ವಾಧೀನವನ್ನು ಈಗಾಗಲೇ ಮೂಡಾ ವಶಕ್ಕೆ ನೀಡಿದ್ದೇವೆ. ಮೂಡಾ ಅಧಿಕಾರಿಗಳು ನಗರಾಭಿವೃದ್ಧಿ ಕಾಯ್ದೆಯಲ್ಲಿ ಒಟ್ಟಿಗೆ ಇಷ್ಟೊಂದು ನಿವೇಶನ ಮಂಜೂರು ಮಾಡಲು ಸಾಧ್ಯವಿಲ್ಲ. ಅದಕ್ಕೆ ಸಚಿವ ಸಂಪುಟದ ಅನುಮೋದನೆ ಬೇಕು. ಎಂದು ಹೇಳುತ್ತಾರೆ. ಸರ್ಕಾರವು ತೆಗೆದುಕೊಳ್ಳುವ ನಿರ್ಣಯವನ್ನು ಸರ್ವೋಚ್ಛ ನ್ಯಾಯಾಲಯ ಮಾನ್ಯ ಮಾಡುವುದರಿಂದ ತಾವು ಈ ಕುರಿತು ಕ್ರಮವಹಿಸಿ ನಮ್ಮ 30ವರ್ಷಗಳ ಬವಣೆಗೆ ಒಂದು ಪರಿಹಾರ ನೀಡಬೇಕೆಂದು ವಿನಂತಿಸಿದರು. ಈ ಸಂದರ್ಭ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮತ್ತಿತರರು ಸಿಎಂ ಜೊತೆಗಿದ್ದರು. ಸಿಎಂ ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: