ಪ್ರಮುಖ ಸುದ್ದಿಮೈಸೂರು

ಹಲವಾರು ಭಾವನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಕಲೆ ಒಂದು ಅದ್ಭುತವಾದ ವೃತ್ತಿ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಣ್ಣನೆ

ಮೈಸೂರು,ಸೆ.11:- ಹಲವಾರು ಭಾವನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಕಲೆ ಒಂದು ಅದ್ಭುತವಾದ ವೃತ್ತಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿಂದು  ಕ್ಯಾಮರಾ ಕ್ಲಿಕ್ಕಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಏರ್ಪಡಿಸಲಾದ ಛಾಯಾಚಿತ್ರ ಪ್ರದರ್ಶನ 2018 ನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ನಗರದ ಪತ್ರಿಕಾ ಛಾಯಾಗ್ರಾಹಕರುಗಳು ಅತ್ಯುತ್ತಮವಾದ ತಮ್ಮ ಕ್ಯಾಮರಾಗಳ ಮೂಲಕ ಸೆರೆಹಿಡಿದ ಹಲವಾರು ಕಲಾ ಚಿತ್ರಗಳ ಪ್ರದರ್ಶನ ಮಾಡಿದ್ದಾರೆ. ಛಾಯಾಗ್ರಾಹಕರ ವೃತ್ತಿ ಸಾಹಸದ ವೃತ್ತಿ. ಈ ಛಾಯಾಗ್ರಹಣ ವೃತ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರೂ ಕೂಡ ಮೈಸೂರಿನವರೇ. ಟಿ.ಎಸ್.ಸತ್ಯನ್ ಪದ್ಮಶ್ರೀ  ಪ್ರಶಸ್ತಿ ಪಡೆಯುವ ಮೂಲಕ ಗುರುತಿಸಿಕೊಂಡರು ಎಂದರು. ಹಲವಾರು ಭಾವನಾತ್ಮಕ ದೃಶ್ಯಗಳಲ್ಲಿ ಸೆರೆಹಿಡಿಯುವ ಕಲೆ ಒಂದು ರೀತಿಯ ಅದ್ಭುತವಾದ ವೃತ್ತಿ. ಛಾಯಾಗ್ರಾಹಕರು ಭಾವನಾತ್ಮಕ ಜೀವಿಗಳು ಅನ್ನುವುದು ನನ್ನ ಭಾವನೆ. ತಮ್ಮಗಳ ಭಾವನೆಯನ್ನು ಊಹೆಯ ಹಲವಾರು. ವಿಶೇಷ ಸ್ಥಳ, ಸಂದರ್ಭ ಗಳಲ್ಲಿ, ಹಲವಾರು ವನ್ಯಜೀವಿಗಳ ಚಟುವಟಿಕೆ, ಚಲನವಲನಗಳನ್ನು ಸೆರೆಹಿಡಿಯುವುದು ಕಲಾತ್ಮಕ ಸಂದರ್ಭ ಎಂದು ಬಣ್ಣಿಸಿದರು. ನೂರಾರು ವಿಷಯಗಳನ್ನು ಬರವಣಿಗೆಯ ಮೂಲಕ ಹೇಳುವ ವಿಷಯಗಳನ್ನು ಛಾಯಾ ಚಿತ್ರದ ಮೂಲಕ ತೋರಿಸತಕ್ಕ ಅದ್ಭುತ ಕಲ್ಪನೆಗಳನ್ನು ನಾವು ಕಾಣಲು ಸಾಧ್ಯ. ಇದೊಂದು ಉತ್ತಮ ವೃತ್ತಿ. ದೂರದರ್ಶನ ಬರುವುದಕ್ಕೆ ಮುನ್ನ ಛಾಯಾಗ್ರಾಹಕರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಈಗಲೂ ಇದೆ. ಪತ್ರಕರ್ತರ ಹಲವಾರು ಸೌಲಭ್ಯ ಕುರಿತು ಪ್ರಸ್ತಾಪಿಸಲಾಗಿದ್ದು, ಸರ್ಕಾರದ ಅಭಿವೃದ್ಧಿಯ  ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ನೀಡಲು ಸದ್ಯದಲ್ಲೆ ಗಮನ ನೀಡಲಾಗುವುದು ಎಂದರು. ಸಮಾಜದ ಲೋಪದೋಷಗಳನ್ನು ತಿದ್ದತಕ್ಕಂತಹ ಪವಿತ್ರವೃತ್ತಿ ಇದಾಗಿದ್ದು, ಸರ್ಕಾರ ಪತ್ರಕರ್ತರಿಗೆ ಸಿಗಬೇಕಾದ ಸೌಲಭ್ಯಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಲಿದೆ ಎಂದರು.

ಇದೇ ವೇಳೆ ‘ ಮೈಸೂರಿನ ಛಾಯಾಚಿತ್ರಗಾರರು ರಾಜ್ಯದ ಹಲವಾರು ಪ್ರದೇಶದ ಪ್ರೇಕ್ಷಣಿಯ ಸ್ಥಳದ ಚಿತ್ರಗಳನ್ನು ಸೆರೆ ಹಿಡಿದಿರುವ ಚಿತ್ರಗಳಲ್ಲಿ ಭಾವನಾತ್ಮಕವಾದ ರೀತಿ ಹಾಗೂ ಹಲವಾರು ಕಥೆಗಳನ್ನು ತಂದಿದ್ದಾರೆ. ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಹಸ್ತಾಕ್ಷರ ನೀಡಿದರು. ಇದೇ ವೇಳೆ ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಅವರಿಗೆ ಟಿ.ಎಸ್.ಸತ್ಯನ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭ ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಉದ್ಯಮಿ ಪಿ.ವಿ.ಗಿರಿ, ದಿ ಇಂಡಿಯನ್  ಎಕ್ಸಪ್ರೆಸ್ ಬ್ಯೂರೋ ಚೀಪ್ ಕೆ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: