ಪ್ರಮುಖ ಸುದ್ದಿಮೈಸೂರು

ಉಪನ್ಯಾಸಕರಿಲ್ಲದ ಕಾಲೇಜುಗಳಲ್ಲಿ ಇನ್ನೂ ಒಂದು ವಾರದಲ್ಲಿ ಉಪನ್ಯಾಸಕರ ಭರ್ತಿ : ಮುಖ್ಯಮಂತ್ರಿ ಕುಮಾರಸ್ವಾಮಿ

ಮೈಸೂರು,ಸೆ.11:- ಉಪನ್ಯಾಸಕರಿಲ್ಲದ ಕಾಲೇಜುಗಳಲ್ಲಿ  ಇನ್ನೂ ಒಂದು ವಾರದಲ್ಲಿ ಉಪನ್ಯಾಸಕರ ಭರ್ತಿ ಮಾಡುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿಂದು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿನಿಯರನ್ನ ಪ್ರೀತಿಯ ಸಹೋದರಿಯರೆಂದು ಸಂಬೋಧಿಸಿದ ಮುಖ್ಯಮಂತ್ರಿಗಳು  ಈ ಹಿಂದೆ 2007 ರಲ್ಲಿ ಈ ಕಾಲೇಜಿಗೆ ಬಂದಿದ್ದೆ.11 ವರ್ಷದ ಹಿಂದೆ ಆಗಮಿಸಿದ್ದೆ. ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜು ಕಾಲೇಜು ಇತಿಹಾಸ ಹೊಂದಿದೆ ಎಂದರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಅನ್ನೋ ಭಾವನೆ ನನ್ನದು. ಈ ಹಿಂದೆಯೂ ಸರ್ಕಾರಿ ಕಾಲೇಜುಗಳ ಸಮಸ್ಯೆ ಬಗೆಹರಿಸಿದ್ದೆ.ಹೊಸದಾಗಿ 55ಸಾವಿರ ಉಪನ್ಯಾಸಕರ ನೇಮಕ ಮಾಡಿದ್ದೆ.ಈ ಸರ್ಕಾರದಲ್ಲಿ 1ಸಾವಿರ ಕೋಟಿ ಶಿಕ್ಷಣ ಇಲಾಖೆಗೆ ಮೀಸಲಿಟ್ಟಿದ್ದೇವೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳ ಪುನಶ್ಚೇತನಕ್ಕೆ,ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಹಲವಾರು ಕಾರ್ಯಕ್ರಮ ಇದ್ದರೂ ನನಗೆ ರಾಜ್ಯದಲ್ಲಿ ಶಿಕ್ಷಣ ಕೊಡಬೇಕು ಅಂದುಕೊಂಡು ಬದುಕುತ್ತಿದ್ದೇನೆ. 12 ವರ್ಷದ ಹಿಂದೆ ಮುಖ್ಯ ಮಂತ್ರಿ ಆಗಿದ್ದಾಗ ಕಲಾ ಕಾಲೇಜು ಇತ್ತು.189 ಕಾಲೇಜುಗಳಿಗೆ ಸ್ಥಾಪಿಸುವಂತೆ ಹೇಳಿದೆ.ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದವರು ಮೈಸೂರಿನ ಒಡೆಯರು. ಈ ಮಹಾರಾಣಿ ಕಾಲೇಜಿನಲ್ಲಿ ಅತ್ಯಂತ ಬಡ ಕುಟುಂಬದ ಮಕ್ಕಳು ಕಲಿಯುತ್ತಿದ್ದಾರೆ. 60 ವರ್ಷಗಳ ನಂತರ ನಾನು ಈ ಕಾಲೇಜಿನ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿದ್ದೆ. ಮಕ್ಕಳ ಆಸೆಗೆ ನಿರಾಸೆ ಮಾಡಬಾರದು. ಅಂಧ ಮಕ್ಕಳಿಂದ ಒಂದು ಮನವಿ ಬಂದಿದೆ. ಸಚಿವ ಜಿ.ಟಿ ದೇವೇಗೌಡರಿಗೆ ಹೇಳುತ್ತಿದ್ದೇನೆ ಇಲ್ಲಿನ  ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಬದ್ಧವಾಗಿದೆ. ನಂಜರಾಜ ಬಹದ್ದೂರು ಛತ್ರವನ್ನು ಉರುಳಿಸಿ ಅಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಚರ್ಚೆ ಮಾಡುತ್ತೇವೆ.46 ಕೋಟಿ ಹಣ ಬಿಡುಗಡೆ ಆಗಬೇಕಿದೆ.ಶತಮಾನೋತ್ಸವದ ಪ್ರಯುಕ್ತ ಏರ್ ಕಂಡೀಷನ್ ಸಭಾಂಗಣ ನಿರ್ಮಾಣವಾಗಲಿದೆ. ಮುಂಭಾಗ ಒಳಭಾಗ,ಬಣ್ಣದ ಬಯಲು ರಂಗ ಮಂದಿರ, ಗ್ರಂಥಾಲಯ, ದಿವ್ಯಾಂಗ ಮಕ್ಕಳಿಗೆ ಕೋರ್ಸ್ ಸೌಲಭ್ಯ ನೀಡುವಂತೆ ಮನವಿ ಮಾಡಿದ್ದಾರೆ. ಇದರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ರೈತರ ಸಾಲ ಮನ್ನಾಕ್ಕೂ ರಾಜ್ಯದ ಅಭಿವೃದ್ಧಿಗೂ ಸಂಬಂಧ ಇಲ್ಲಾ. ಯಾರ್ ಯಾರೋ ಹೇಳೋದನ್ನು ಕೇಳಬೇಡಿ ಎಮದು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದರು. ಯಾವ ಯಾವ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲವೋ ಆ ಕಾಲೇಜುಗಳಲ್ಲಿ ಇನ್ನು ಒಂದು ವಾರದಲ್ಲಿ ಉಪನ್ಯಾಸಕರನ್ನು ಭರ್ತಿ ಮಾಡಲಾಗುವುದು ಎಂದರು. ಯಾರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಈ ಸರ್ಕಾರ ಭದ್ರವಾಗಿರುತ್ತೇ ಇದು ಸ್ಪಷ್ಟ. ಜನತೆಯ ಆಯ್ಕೆಯಿಂದ ನಾನು ಸಿಎಂ ಆಗಿದ್ದೇನೆ. ನನ್ನ ಉದ್ದೇಶ ಜನರ ಸೇವೆ ಮಾಡುವುದು ಎಂದರಲ್ಲದೇ ಗೌರಿ ಗಣೇಶದ ಹಬ್ಬಕ್ಕೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: