ಪ್ರಮುಖ ಸುದ್ದಿ

ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ : ವಿದ್ಯಾರ್ಥಿನಿ ಸಾವು

ರಾಜ್ಯ(ಬೆಂಗಳೂರು)ಸೆ.11:- ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬೆಂಗಳೂರು- ಹೊಸೂರು ಮುಖ್ಯ ರಸ್ತೆಯ ಬೊಮ್ಮಸಂದ್ರ ಸರ್ವಿಸ್ ರೋಡ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮೃತರನ್ನು ಬೊಮ್ಮಸಂದ್ರದ ಲಯ(19) ಎಂದು ಗುರುತಿಸಲಾಗಿದೆ. ಹುಸ್ಕೂರು ಬಳಿಯ ಎಸ್‌ಎಫ್‌ಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಲಯ ಬೆಳಿಗ್ಗೆ ಮನೆಯಿಂದ ಸ್ಕೂಟಿಯಲ್ಲಿ ಬೊಮ್ಮಸಂದ್ರ ಸರ್ವಿಸ್ ರೋಡ್ ಮಾರ್ಗವಾಗಿ ಕಾಲೇಜಿಗೆ ತೆರಳುತ್ತಿದ್ದಾಗ ಎದುರು ಕಡೆಯಿಂದ ಬರುತ್ತಿದ್ದ ರೋಡ್ ರೋಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಲಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ರೋಡ್ ರೋಲರ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: